ಚೆಯ್ಯಂಡಾಣೆ, ಡಿ. ೧೮: ದೆಹಲಿಯ ನೋಯ್ಡಾದಲ್ಲಿ ತಾ. ೩೧ ರಿಂದ ನಡೆಯಲಿರುವ ರಾಜ್ಯಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಯಂಗ್ ಸ್ಟಾರ್ ಕ್ರಿಕೆಟ್ ಲೀಗ್ ಕ್ಲಬ್ ತಂಡದ ಪರವಾಗಿ ಭಾಗವಹಿಸಲು ಅಯ್ಯಂಗೇರಿಯ ಕೆ. ನಾಝಿಮ್ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ಸೆಂಟ್ಆ್ಯನ್ಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಯಾಗಿರುವ ನಾಝಿಮ್ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಕೆ. ಇಸ್ಮಾಯಿಲ್ ಹಾಗೂ ರುಬೀನಾ ದಂಪತಿಯ ಪುತ್ರ.