ಚೆಯ್ಯಂಡಾಣೆ, ಡಿ. ೧೯: ಮೂರ್ನಾಡಿನ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಗ್ರೀನ್ ಡೇ ಹಾಗೂ ೬ ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಗತಿ ಪ್ರಥಮ್ ಮೈಸೂರ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಇಂಗ್ಲೀಷ್ ಫೇರ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ವಹಿಸಿ ಉದ್ಘಾಟಿಸಿದರು. ಗ್ರೀನ್ ಡೇ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಪರಿಸರ ಜ್ಞಾನ, ಬಣ್ಣಗಳ ಪರಿಚಯ, ಹಸಿರು ಬಣ್ಣದ ತರಕಾರಿಗಳು ಮತ್ತು ಬಣ್ಣದ ವಸ್ತುಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳು ಹಸಿರು ಬಣ್ಣದ ವಿವಿಧ ಬಗೆಯ ತರಕಾರಿ ಹಾಗೂ ಹಣ್ಣುಗಳನ್ನು ಪ್ರದರ್ಶಿಸಿದರು. ಮಕ್ಕಳು ಛದ್ಮವೇಷ ಧರಿಸಿ ಅವುಗಳ ಬಗ್ಗೆ ವಿವರಣೆ ನೀಡಿದರು.
ಪ್ರಗತಿ ಪ್ರಥಮ್ ಮೈಸೂರ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಇಂಗ್ಲೀಷ್ ಫೇರ್ ಕಾರ್ಯಕ್ರಮದಲ್ಲಿ ಮಕ್ಕಳು ಇಂಗ್ಲಿಷ್ ಕಲಿಕೋಪಕರಣ ಪ್ರದರ್ಶಿಸಿ ಅದರ ವಿವರಣೆಯನ್ನು ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಆರ್. ಪ್ರೇಮಾಕುಮಾರಿ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭ ಶಾಲೆಯ ಉಪಾಧ್ಯಕ್ಷ ಲೋಕೇಶ್, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮಾನ್ಯ ಸ್ವಾಗತಿಸಿ, ನಿರೀಕ್ಷ, ಈಶಾನ್ ಗೌಡ ನಿರೂಪಿಸಿ, ಮನೀಶ್ ವಂದಿಸಿದರು.