*ಗೋಣಿಕೊಪ್ಪ, ಡಿ. ೨೧: ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಮೀನಾ ಎಂ.ಎA. ಆಯ್ಕೆಯಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಚೆನ್ನಂಗೊಲ್ಲಿ ನಿವಾಸಿಯಾಗಿರುವ ಇವರು ಅವಿನಾ ಡ್ರಿಮ್ಸ್ ವರ್ಲ್ಡ್ ಸೇವಾ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಇವರು ಸರಕಾರಿ ಶಾಲೆಗಳಿಗೆ ಸಿ.ಸಿ. ಕ್ಯಾಮರಾ ಮತ್ತು ಇನ್ನಿತರ ಪೀಠೋಪಕರಣಗಳ ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ಸಂಕಷ್ಟದಲ್ಲಿರುವವರ ಸೇವೆಯಲ್ಲಿ ನಿರಂತರಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ, ಕಾರುಣ್ಯಾಶ್ರಮದ ಸಂಸ್ಥಾಪಕ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು ಅವರು ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಂಪರ್ಕಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಮಾಹಿತಿ ನೀಡಿದ್ದಾರೆ.