ವೀರಾಜಪೇಟೆ

ವೀರಾಜಪೇಟೆ: ವಿರಾಜಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ೫ ವರ್ಷದ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆಯನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವತಿಯಿಂದ ಸಿಬ್ಬಂದಿಗಳು ನೀಡಿದ್ದರು.

ಕಡಂಗ: ವೀರಾಜಪೇಟೆ ನಗರದ ಮೊಗರಗಲ್ಲಿಯಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಮುಂಜಾನೆ ಯಿಂದ ಪುಟ್ಟ ಮಕ್ಕಳಿಗೆ ಲಸಿಕೆ ನೀಡಲಾಯಿತು. ಕ್ಲಿನಿಕ್‌ನಲ್ಲಿ ಅಂಗನವಾಡಿ ಶಿಕ್ಷಕಿ ಸಮೀನಾ ಮತ್ತಿತರರು ಹಾಜರಿದ್ದರು.ಕೂಡಿಗೆ: ಹೆಬ್ಬಾಲೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡ , ರಾಜ್ಯ ಐ .ಎನ್ . ಟಿ.ಸಿ .ನ ಅಧ್ಯಕ್ಷ ನಾಪಂಡ ಮುತ್ತಪ್ಪರವರು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣ ಕುಮಾರಿ, ಸದಸ್ಯ ಮಂಜುನಾಥ, ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ಸದಸ್ಯ ರವಿ, ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.ಸುಂಟಿಕೊಪ್ಪ : ಸುಂಟಿಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಅವರು ಗದ್ದೆಹಳ್ಳದ ಅಂಗನವಾಡಿಯಲ್ಲಿ ದಿನದ ಮೊದಲ ಪಲ್ಸ್ ಪೋಲಿಯೋ ಹನಿಯನ್ನು ನೀಡಿದರು. ನಂತರ ಸುಂಟಿಕೊಪ್ಪ ಬಸ್‌ನಿಲ್ಧಾಣದಲ್ಲಿ ನಡೆದ ಪಲ್‌ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀದೇವಿ ಬಡಾವಣೆ ಮತ್ತು ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೂಡಿಗೆ: ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ವತಿಯಿಂದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೋಟರಿ ಕುಶಾಲನಗರ ಕ್ಲಬ್ ಅಧ್ಯಕ್ಷ ಮನು ಪೆಮ್ಮಯ್ಯ ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್, ರೋಟರಿ ಕಾರ್ಯದರ್ಶಿ ಮಂಜುನಾಥ್ ಎಚ್.ಪಿ., ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಿಕಾ, ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಕೊಡ್ಲಿಪೇಟೆ: ಪ್ರಾಥಮಿಕ ಆರೋಗ್ಯ ಇಲಾಖೆ ಕೊಡ್ಲಿಪೇಟೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯಿAದ ನಡೆಸಿಕೊಡಲಾಯಿತು ಪ್ರವೀಣ್ ಹೆಚ್ ಜೆ ಅವರು ಮತ್ತು ಅಧ್ಯಕ್ಷರಾದ ಉಮೇಶ್ ದಿವಾಕರ್ ಯತೀಶ್ ಮತ್ತು ಡಾಕ್ಟರ್ ಧನಿಕ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಮುಳ್ಳೂರು: ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ೧೩ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಹಾಕಲಾಯಿತು ಮತ್ತು ರೋಟರಿ ಕ್ಲಬ್‌ನಿಂದ ಲಸಿಕೆ ಕೇಂದ್ರಗಳಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.

ಕಾರ್ಯಕ್ರಮದಲ್ಲಿ ಮಲ್ಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ಕಿರಣ್, ಮುಂದಿನ ಸಾಲಿನ ಅಧ್ಯಕ್ಷ ಸಂಪತ್‌ಕುಮಾರ್, ಸದಸ್ಯರಾದ ತಮ್ಮಯ್ಯ, ವೆಂಕಟೇಶ್, ದಯಾನಂದ್, ಸತೀಶ್‌ಕುಮಾರ್, ಆನಂದ್, ಲೋಕೇಶ್ ಹಾಜರಿದ್ದರು.ನಾಪೋಕ್ಲು: ಸಮೀಪದ ಹಳೇತಾಲೂಕು ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪಂಚಾಯತ್ ಸದಸ್ಯರು , ಸ್ಥಳದಾನಿಗಳಾದ ಕುಲ್ಲೇಟಿರ ಅರುಣ್ ಬೇಬ, ಪಂಚಾಯತ್ ಸದಸ್ಯರಾದ ಹೇಮಾ ಅರುಣ್ ಮತ್ತು ಇಲ್ಲಿಯ ಪೊಲೀಸ್ ಠಾಣೆಯ ಎಎಸ್‌ಐ ರಾಮಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತರಾದ ಭಾಗ್ಯವತಿ, ಪವಿತ್ರ, ಸುಜಾತಾ,ಆಶಾ ಕಾರ್ಯಕರ್ತರಾದ ರಮ್ಯ ಹಾಗೂ ಪೋಷಕರು ಮಕ್ಕಳು ಹಾಜರಿದ್ದರು. ಶನಿವಾರಸಂತೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಗುಂಡೂರಾವ್ ಬಡಾವಣೆ, ತ್ಯಾಗರಾಜ ಕಾಲೋನಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ೪ ಬೂತ್‌ಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬೂತ್‌ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಹಾಗೂ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಬೂತ್‌ನಲ್ಲಿ ಒಟ್ಟು ೨೨೦ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಶ್ರೀನಿವಾಸನ್, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್ ಬೂತ್‌ಗೆ ಭೇಟಿ ನೀಡಿ ಪರಿಶೀಲಿಸಿದರು.ಶುಶ್ರೂಷಕಿ ಸುರಬಿ, ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸರಸ್ವತಿ, ಅಂಗನವಾಡಿ ಶಿಕ್ಷಕಿ ಧನಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಉಷಾಜಯೇಶ್, ರೂಪಾ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.ಕಡಂಗ: ಅರಪಟ್ಟು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವೈದ್ಯಾಧಿಕಾರಿ ಶುಭ ಅವರು ಮಗುವಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ, ಸೌಮ್ಯ, ಕವಿತ, ಹಾಗು ಆಶಾ ಕಾರ್ಯಕರ್ತೆ ಸುಮಿತ್ರ, ಪುನೀತ್ ತಮ್ಮಯ್ಯ, ಪತ್ರಕರ್ತ ಅಶ್ರಫ್ ಹಾಜರಿದ್ದರು.ಕಣಿವೆ : ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ, ಕುಶಾಲನಗರ ರೋಟರಿ ಸಂಸ್ಥೆಯ ಡಾ. ಹರಿ ಎ.ಶೆಟ್ಟಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.ಕರಿಕೆ: ಇಲ್ಲಿನ ಚೆತ್ತುಕಾಯ ಬಸ್ ನಿಲ್ದಾಣದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕೆ. ಎ. ನಾರಾಯಣ ರವರು ಮಗುವಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಯರಾದ ಉಷಾಲತಾ ಹಾಗು ವಸಂತಿ ಹಾಜರಿದ್ದರು.ಸಿದ್ದಾಪುರ: ಗುಹ್ಯ ಗ್ರಾಮದ ಕೂಡುಗದ್ದೆಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಎ.ಎಸ್.ಹಸನ್ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ದೇವಯಾನಿ. ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಶಿವನಂದ ಬಿರಾದಾರ. ಅಂಗನವಾಡಿ ಶಿಕ್ಷಕಿ ರಜಿನಿ ಮತ್ತು ಸರಸು ಹಾಗೂ ಆಶಾ ಕಾರ್ಯಕರ್ತೆಯರಾದ ಜೀಶಾ ಹಾಜರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಲಸಿಕೆ ಹಾಕುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಚು ಗೌತಮಿ, ಶುಸ್ರೂಷಕಿ ಪೂಜಾ ,ಆಶಾ ಕಾರ್ಯಕರ್ತೆ ರಾಜೇಶ್ವರಿ,ಅಂಗನವಾಡಿ ಕಾರ್ಯಕರ್ತೆ ತಾರ,ಸಿಬ್ಬಂದಿಗಳಾದ ಮಂಜುಳಾ,ಭವಾನಿ ಮತ್ತಿತರರು ಉಪಸ್ಥಿತರಿದ್ದರು.ಚೆಯ್ಯಂಡಾಣೆ: ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೋಕ್ಲು ಆರೋಗ್ಯ ಉಪ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎ.ಹನೀಫ್ ಲಸಿಕೆ ಹಾಕುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ಸಿಎಚ್ ಓ ಕಲಾಂಜಲಿ,ಆಶಾ ಕಾರ್ಯಕರ್ತೆ ಅಸ್ಮ,ಅಂಗನವಾಡಿ ಕಾರ್ಯಕರ್ತೆಯರಾದ ಪಿ.ಎಚ್. ಸಾಕಿರ,ಕೆ.ಎಂ.ಜುವೈನ ಮತ್ತಿತರರು ಉಪಸ್ಥಿತರಿದ್ದರು.ಶನಿವಾರಸಂತೆ: ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೋ ಮುಕ್ತ ರಾಷ್ಟç ಎಂದು ಭಾರತವನ್ನು ಘೋಷಿಸಿದ್ದು; ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಹು ದೊಡ್ಡ ಗೆಲುವು ಸಾಧಿಸಿದ ದೇಶ ನಮ್ಮ ಭಾರತ ಎಂಬ ಗರಿಮೆಗೆ ಪಾತ್ರವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್.ಸಿ.ಎಚ್ ವಿಭಾಗದ ವತಿಯಿಂದ ಕೊಡ್ಲಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪತ್ನಿ ಡಾ.ನಗ್ಮಾ ಬಾನು ಅವರೊಂದಿಗೆ ತಮ್ಮ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೋಲಿಯೋ ಲಸಿಕೆ ಹಾಕಿಸುವುದರಿಂದ ಪುಟ್ಟ ಮಕ್ಕಳ ಮೇಲೆ ಪರಿಣಾಮ ಬೀರುವ ದುರ್ಬಲ ಹಾಗೂ ಮಾರಕ ಕಾಯಿಲೆಯಾಗಿರುವ ಪೋಲಿಯೋ ವೈರಸ್ ಹರಡುವುದನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದರು.

ಶುಶ್ರೂಷಕಿ ದೇವಮ್ಮ, ಅಂಗನವಾಡಿ ಶಿಕ್ಷಕಿಯರಾದ ಮಂಜುಳಾ, ನಿರ್ಮಲಾ, ನಜ್ಮಾ, ಆಶಾ ಕಾರ್ಯಕರ್ತೆ ಅನಿತಾ, ಯಸಳೂರು ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮಹೇಶ್ ಬಾಬು, ಡಿ.ಎಂ.ಸುಮಾ, ಪೃಥ್ವಿ ಇತರರು ಹಾಜರಿದ್ದರು. ಸೋಮವಾರಪೇಟೆ: ವಿಶ್ವದಿಂದ ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡಲು ಎಲ್ಲರೂ ಸಾಮಾಜಿಕ ಜವಾಬ್ದಾರಿ ಹೊರಬೇಕು. ಈ ನಿಟ್ಟಿನಲ್ಲಿ ೫ವರ್ಷದ ಒಳಗಿನ ಯಾವೊಬ್ಬ ಮಗುವೂ ಸಹ ಪೋಲಿಯೋ ಹನಿಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದು ಸೋಮವಾರಪೇಟೆ ರೋಟರಿ ಸಂಸ್ಥೆ ಅಧ್ಯಕ್ಷೆ ವೀಣಾ ಮನೋಹರ್ ಹೇಳಿದರು.

ಆರೋಗ್ಯ ಇಲಾಖೆ ವತಿಯಿಂದ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಮೀರ್ ಅಹ್ಮದ್ ಮಾತನಾಡಿ, ವಲಸೆ ಕಾರ್ಮಿಕರ ಮಕ್ಕಳೂ ಸಹ ಲಸಿಕೆಗೆ ಒಳಪಡಬೇಕು. ಲಸಿಕೆಯಿಂದ ಯಾವೊಬ್ಬ ಮಗುವೂ ಹೊರಗುಳಿಯಬಾರದು.

ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ಸ್ವಯಂ ಸೇವಾ ಸಂಘ ಸಂಸ್ಥೆಗಳು ಲಸಿಕಾ ಅಭಿಯಾನದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಮೇಶ್, ರೋಟರಿ ಮಾಜೀ ಅಧ್ಯಕ್ಷ ಪಿ.ಕೆ. ರವಿ, ಸದಸ್ಯರುಗಳು, ಆಸ್ಪತ್ರೆಯ ವೈದ್ಯರಾದ ಡಾ. ಕಿರಣ್, ಹಿರಿಯ ಶುಶ್ರೂಷಕ ಅಧಿಕಾರಿ ವಸಂತಿ, ಪಿಹೆಚ್‌ಸಿಓ ಅನಿತಾ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ೧೦೦ ಮಕ್ಕಳಿಗೆ, ಪತ್ರಿಕಾಭವನ ಸಮೀಪವಿರುವ ಜೈಜವಾನ್ ಮಾಜೀ ಸೈನಿಕರ ಸಂಘದ ಕಚೇರಿಯಲ್ಲಿ ತೆರೆದಿದ್ದ ಬೂತ್‌ನಲ್ಲಿ ೫೩, ಜನತಾ ಕಾಲೋನಿ ಅಂಗನವಾಡಿಯಲ್ಲಿ ೫೮, ಎಸ್‌ಜೆಎಂ ಶಾಲೆಯಲ್ಲಿ ೫೪, ಸರ್ಕಾರಿ ಬಸ್ ನಿಲ್ದಾಣದ ಬೂತ್‌ನಲ್ಲಿ ೫೯ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು.

ಬಸ್ ನಿಲ್ದಾಣದ ಬೂತ್ ಹೊರತು ಪಡಿಸಿ ಪಟ್ಟಣ ವ್ಯಾಪ್ತಿಯಲ್ಲಿ ೨೪೦ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದರಲ್ಲಿ ೨೬೫ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ. ೧೧೦ ಸಾಧನೆಯಾಯಿತು. ಒಟ್ಟಾರೆಯಾಗಿ ಪಟ್ಟಣ ವ್ಯಾಪ್ತಿಯಲ್ಲಿ ೩೨೪ ಮಕ್ಕಳಿಗೆ ಲಸಿಕೆ ನೀಡಲಾಯಿತು.

ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಲಸಿಕೆ ಅಭಿಯಾನ ಯಾವುದೇ ಸಮಸ್ಯೆಯಿಲ್ಲದಂತೆ ಜರುಗಿತು. ಪೋಷಕರು ತಮ್ಮ ಮಕ್ಕಳನ್ನು ಸಮೀಪದ ಪಲ್ಸ್ ಪೋಲಿಯೋ ಬೂತ್‌ಗೆ ಕರೆತಂದು ಲಸಿಕೆ ಹಾಕಿಸಿದರು. ಲಸಿಕಾ ಕೇಂದ್ರದಲ್ಲಿ ಓರ್ವ ಸಿಬ್ಬಂದಿ, ಈರ್ವರು ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಕರ್ತವ್ಯ ನಿರ್ವಹಿಸಿದರು.