ಕಣಿವೆ, ಡಿ. ೨೨: ಬಿಲ್ಲವ ಸಮಾಜ ಬಾಂಧವರು ಒಗ್ಗೂಡಿ ಸಂಘಟಿತರಾಗುವ ಮೂಲಕ ಉತ್ತಮ ಸಮಾಜ ಕಟ್ಟಲು ಮುಂದಾಗಬೇಕೆAದು ಸೋಲೂರು ಮಠದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದರು.

ಕುಶಾಲನಗರ ತಾಲೂಕು ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಪಟ್ಟಣದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಗುರುನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಈ ನಾಡು ಕಂಡ ಶ್ರೇಷ್ಠ ಸಾಧಕರಲ್ಲಿ ಒಬ್ಬರಾದ ಕೋಟಿ ಚೆನ್ನಯ್ಯ, ನಾರಾಯಣ ಗುರುಗಳಂತಹ ಮಹನೀಯರ ಆದರ್ಶಗಳು ಹಾಗೂ ಚಿಂತನೆಗಳನ್ನು ಸಮಾಜದಲ್ಲಿ ಮೊಳಗಿಸುವ ಮೂಲಕ ಸುಸ್ಥಿರ ಹಾಗೂ ಸುಂದರ ಸಮಾಜ ಕಟ್ಟಲು ಸಮಾಜ ಬಾಂಧವರು ಕಟಿಬದ್ಧರಾಗಬೇಕಿದೆ ಎಂದರು.

ನಾರಾಯಣ ಗುರು ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ ಪೂಜಾರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಿಲ್ಲವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಹಾಗೂ ಜ್ಞಾನ ಬಹಳ ಮುಖ್ಯ. ಸಮಾಜ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಹೇಳಿದರು.

ದಿಕ್ಸೂಚಿ ನುಡಿಗಳಾಡಿದ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕೊಡಗಿನಲ್ಲಿ ಬಿಲ್ಲವರ ಸಂಖ್ಯೆ ಹೆಚ್ಚಿದ್ದು, ಸಂಘಟನೆಯನ್ನು ಬಲಪಡಿಸಲು ಅನುಕೂಲವಾಗುತ್ತಿದೆ. ಸಮಾಜ ವನ್ನು ಇನ್ನಷ್ಟು ಬಲಗೊಳಿಸಲು ನೆರವಾಗಬೇಕು. ಹಾಗೆಯೇ ಸಮಾಜದ ಪದಾಧಿಕಾರಿಗಳು ಸಮುದಾಯದ ಮಂದಿಯ ಕಷ್ಟ ಕಾರ್ಪಣ್ಯಗಳಲ್ಲಿ ಕೈಜೋಡಿಸುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬಬೇಕು ಎಂದರು.

ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಪೂಜಾರಿ ಮಾತನಾಡಿ, ಕುಶಾಲನಗರದಲ್ಲಿ ೩೦೦ ಕ್ಕೂ ಅಧಿಕ ಬಿಲ್ಲವ ಕುಟುಂಬಗಳಿದ್ದು ಅಲ್ಪ ಸಮಯದಲ್ಲಿ ರಚನೆಯಾದ ಬಿಲ್ಲವ ಸಮಾಜ ಬಹಳ ಸಮರ್ಥವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನಡೆವ ಚುನಾವಣೆಗಳಲ್ಲಿ ಬಿಲ್ಲವ ಸಮುದಾಯದವರಿಗೆ ಹೆಚ್ಚಿನ ಸ್ಥಾನ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದರು.

ಕಾರ್ಯಕ್ರಮದ ಆರಂಭಕ್ಕೂ ಮುನ್ನಾ ಶ್ರೀ ಕೋಟಿ ಚೆನ್ನಯ್ಯ ಮತ್ತು ಶ್ರೀ ನಾರಾಯಣ ಗುರುಗಳ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಮಹಾಸಭೆ ಅಂಗವಾಗಿ ಬೈಚನಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಗಣಪತಿ ದೇವಸ್ಥಾನದವರೆಗೂ ಮುಖ್ಯ ರಸ್ತೆಗಳಲ್ಲಿ ಸಮಾಜ ಬಾಂಧವರ ಒಗ್ಗಟ್ಟಿನ ಜಾಗೃತಿ ಯಾತ್ರೆ ನಡೆಯಿತು.

ಹಾಗೆಯೇ ಸಮಾಜ ಬಾಂಧವರಿಗೆ ಹಮ್ಮಿಕೊಂಡಿದ್ದ ಅಟೋಟ ಹಾಗೂ ಸಾಂಸ್ಕೃತಿಕಗಳ ವಿಜೇತರು ಮತ್ತು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ಗೌರವ ಅಧ್ಯಕ್ಷ ಬಿ.ಟಿ.ರಮೇಶ್, ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷೆ ಕುಸುಮಾವತಿ,ಖಜಾಂಚಿ ಆಶಾ ಅಣ್ಣಪ್ಪ, ಸದಸ್ಯರಾದ ಅಶೋಕ್, ಉಮೇಶ್, ಸುನಿಲ್, ಶಶಿಕಲಾ, ಮನೋಜ್, ಸೌಮ್ಯ ಭರತ್, ಶೋಭಾ, ಭವಾನಿ, ಸುಶೀಲಾ, ಅಣ್ಣು ಪೂಜಾರಿ, ಲೀಲಾ ಇದ್ದರು.

ಚೈತ್ರ ಶಾಲ್ಯಾನ್ ಸ್ವಾಗತಿಸಿದರು. ಸತೀಶ್ ಕುಂದರ್ ನಿರೂಪಿಸಿದರು. ರೇಶ್ಮಾ ಮೋನಪ್ಪ ವಂದಿಸಿದರು.