ಮಡಿಕೇರಿ, ಡಿ. ೨೭ : ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಹಾಗೂ ಮಂದ್‌ನಲ್ಲಿ ಪುತ್ತರಿ ಕೋಲಾಟ್ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಅತಿಥಿಗಳನ್ನು ತಳಿಯಕ್ಕಿ ಬೊಳಕ್, ವಾಲಗ ಹಾಗೂ ದುಡಿಕೊಟ್ಟಿನೊಂದಿಗೆ ಸಮಾಜಕ್ಕೆ ಸ್ವಾಗತಿಸಲಾಯಿತು. ದೇವರಿಗೆ ಅಕ್ಕಿ ಹಾಕಿ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ್ಪ ಭಾಗವಹಿಸಿ ಮಾತನಾಡಿ ಸಮಾಜ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.

ಸಮಾಜದ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊಡವಾಮೆಯನ್ನು ಬೆಳೆಸುವ ಮೂಲ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಈ ಬಗ್ಗೆ ಚಿಂತಿಸಬೇಕೆAದರು. ಬೆಂಗಳೂರು ಕೊಡವ ಸಮಾಜದಿಂದ ವಿವಿಧೆಡೆ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದ್ದು ಕೊಡವ ಮಕ್ಕಳಿಗೆ ರಿಯಾಯಿತಿ ನೀಡುತ್ತಿದ್ದೇವೆ. ಕೊಡವ ವಧು ವರ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ದೇಶ ವಿದೇಶದಲ್ಲಿರುವ ಕೊಡವರ ಸಂಪರ್ಕ ಬೆಳೆಸುತ್ತೇವೆಂದರು.

ಕೊಡವಾಮೆ, ಸಂಸ್ಕೃತಿ, ಆಚಾರ ವಿಚಾರ ಉಳಿಸಬೇಕಾದರೆ ಪೋಷಕರು ಯುವ ಪೀಳಿಗೆಗೆ ತಿಳಿಸುವಂತಾಗಬೇಕೆAದರು. ಮಡಿಕೇರಿ ಕೊಡವ ಸಮಾಜದ ಅಭಿವೃದ್ಧಿಗೆ ಬೆಂಗಳೂರು ಸಮಾಜ ಸಹಕಾರ ನೀಡಲಿದೆಯೆಂದರು. ಮಡಿಕೇರಿ ಕೊಡವ ಸಮಾಜದ ಅಭಿವೃದ್ಧಿಗೆ ರೂ. ೧ ಲಕ್ಷ ಹಣ ಸಹಾಯ ನೀಡುವುದಾಗಿ ಸುರೇಶ್ ನಂಜಪ್ಪ ಈ ಸಂದರ್ಭ ಪ್ರಕಟಿಸಿದರು.

ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಮಾತನಾಡಿ, ಕೊಡವ ಸಮಾಜದ ವತಿಯಿಂದ ಕೊಡವ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಲು ಶ್ರಮಿಸುತಿದ್ದೇವೆ, ಮಡಿಕೇರಿಯಲ್ಲಿರುವ ೧೨ ಕೊಡವ ಕೇರಿಗಳು ಸಮಾಜಕ್ಕೆ ಸದಾ ಸಹಕಾರ ನೀಡುತಿವೆ. ಪುತ್ತರಿ ನಮ್ಮೆಯ ಹಿನ್ನೆಲೆಯಲ್ಲಿ ಮೂರುದಿನ ಈಡ್ ನಡೆಸಿ ಇಂದು ಕೋಲಾಟನ್ನು ಪ್ರದರ್ಶನಗೊಳಿಸುತಿದ್ದೇವೆಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಹಾಗ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ನಿರ್ದೇಶಕರಾದ ಶಾಂತೆಯAಡ ವಿಶಾಲ್ ಕಾರ್ಯಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ಕನ್ನಂಡ ಕವಿತ ಕಾವೇರಮ್ಮ, ಕಾಂಡೇರ ಲಲ್ಲು, ಪಾಲೆಯಂಡ ರೂಪ, ಪೆಮ್ಮಡಿಯಂಡ ಉತ್ತಪ್ಪ, ಪುಲ್ಲೆರ ವಸಂತ್, ಮಡಿಕೇರಿ ಸಮಾಜದ ಸದಸ್ಯರು, ಕೊಡವ ಕೇರಿ ಪದಾಧಿಕಾರಿಗಳು ಭಾಗವಹಿಸಿದರು.

ಉಪಾದ್ಯಕ್ಷ ಕೇಕಡ ವಿಜು ದೇವಯ್ಯ ಕಾರ್ಯ ಕ್ರವನ್ನು ನಿರೂಪಿದರು.ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ ಸ್ವಾಗತಿಸಿ, ನಿರ್ದೇಶಕರಾದ ನಂದಿನೆರವAಡ ರವಿ ಬಸಪ್ಪ ಅತಿಥಿ ಪರಿಚಯಿಸಿ, ಜಂಟಿ ಕಾರ್ಯದರ್ಶಿ ನಂದನೆರವAಡ ದಿನೇಶ್ ವಂದಿಸಿದರು.

ಮಧ್ಯಾಹ್ನದ ನಂತರ ಕೊಡವ ಸಂಪ್ರದಾಯದೊAದಿಗೆ ಕೊಡವ ಸಮಾಜದಿಂದ ಕೋಲ್‌ಮಂದ್‌ಗೆ ಮೆರವಣಿಗೆ ತೆರಳಿದರು. ಕಾವೇರಿ ಕೇರಿಯವರು ಮಂದ್‌ಗೆ ಸ್ವಾಗತಿಸಿದರು. ನಂತರ ಕೋಲಾಟ್, ಬೊಳಕಾಟ್, ಕತ್ತಿಯಾಟ್ ಉಮ್ಮತಾಟ್ ಹಾಗೂ ವಾಲಗತಾಟ್ ನಡೆಯಿತು.