ಸೋಮವಾರಪೇಟೆ, ಜ. ೧ :ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಗರದಲ್ಲಿ ಸ್ವಚ್ಛ ಭಾರತ್ ಮಿಷನ್ ೨.೦ ಯೋಜನೆಯ ಘಟಕವಾದ ಮಾಹಿತಿ ಶಿಕ್ಷಣ ಸಂವಹನ ಅಡಿಯಲ್ಲಿ, ಪಂಚಾಯಿತಿ ವ್ಯಾಪ್ತಿಯ ಸಂತೆ ಮಾರುಕಟ್ಟೆಯಲ್ಲಿ ಹಸಿಕಸ, ಒಣಕಸ, ಅಪಾಯಕಾರಿ ಕಸ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಅರಿವು ಪ್ರಚಾರದಲ್ಲಿ ಪಂಚಾಯಿತಿ ಸಿಬ್ಬಂದಿಗಳಾದ ಆದಿಲ್, ಹನುಮ, ಲೋಕೇಶ್, ರೆಹಾನ, ಆಶ್ರಿತಾ, ಅರುಣ್, ಸಬೀನಾ ಭಾಗಿಯಾಗಿದ್ದರು.