ಕಣಿವೆ, ಜ. ೭: ಇಲ್ಲಿನ ವೀರಶೈವ ಸಮುದಾಯದ ವತಿಯಿಂದ ನಗರದ ಬಲಮುರಿ ದೇವಾಲಯ ಮಾರ್ಗದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣಕ್ಕಾಗಿ ಶ್ರಮಿಸಿದ ಸಮಾಜದ ದಾನಿಗಳಾದ ಎಂ.ಕೆ. ಧನರಾಜು, ಕವಿತಾ ಧನರಾಜು, ಬಿ. ನಟರಾಜು ಹಾಗೂ ರೇಖಾ ನಟರಾಜು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಪ್ರಶಸ್ತಿಗಳಿಗೆ ಭಾಜನರಾದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್, ವಿರೂಪಾಕ್ಷ, ಹೇಮಲತಾ, ರೇಣುಕಾಸ್ವಾಮಿ ಹಾಗೂ ಕಲಾವತಿ ಅವರನ್ನು ಸನ್ಮಾನಿಸಲಾಯಿತು.

ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ವೀರಶೈವ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ನಂದೀಶ್, ವೀರಶೈವ ಸಮಾಜದ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಸಹಕಾರ ಸಂಘದ ಉಪಾಧ್ಯಕ್ಷೆ ನೇತ್ರಾವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀಣಾ, ರವೀಶ್, ಶಿಕ್ಷಕಿ ಸೌಭಾಗ್ಯ, ಸುರೇಶ್ ಮೊದಲಾದವರಿದ್ದರು.