ಮಡಿಕೇರಿ, ಜ. ೭: ಪೊನ್ನಂಪೇಟೆಯ ಹಳ್ಳಿಗಟ್ಟುವಿನಲ್ಲಿರುವ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ವತಿಯಿಂದ ಆಯೋಜಿತ “ಮೆಟೀರಿಯಲ್ಸ್ ಅಂಡ್ ಟೆಕ್ನಾಲಜಿಗಳಲ್ಲಿನ ಪ್ರಗತಿಗಳು: ಥರ್ಮಲ್, ಮೆಕ್ಯಾನಿಕಲ್ ಮತ್ತು ಕ್ರಯೋಜೆನಿಕ್ ದೃಷ್ಟಿಕೋನಗಳು” ಕುರಿತ ೬ ದಿನಗಳು ಆಯೋಜಿಸಲ್ಪಟ್ಟಿದ್ದ ಎಐಸಿಟಿಇ ಪ್ರಾಯೋಜಿತ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮ ಸಮಾರೋಪಗೊಂಡಿದೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿವಿಸಿಇ ಮೈಸೂರಿನ ಪ್ರಾಂಶುಪಾಲ ಡಾ. ಬಿ ಸದಾಶಿವೇಗೌಡ ಅವರು ಸಂಶೋಧನೆ ಮತ್ತು ಗುಣಮಟ್ಟದ ಪ್ರಕಟಣೆಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕೆಇಎಸ್‌ನ ಉಪಾಧ್ಯಕ್ಷ ಎಂ.ಎA. ತಿಮ್ಮಯ್ಯ ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ಅಧ್ಯಾಪಕರ ಪಾತ್ರದ ಕುರಿತು ಮಾತನಾಡಿದರು. ಸಿಐಟಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಎಐಸಿಟಿಇ ಪ್ರಾಯೋಜಿತ ಕಾರ್ಯಾಗಾರಗಳ ಮಹತ್ವವನ್ನು ತಿಳಿಸಿದರು.. ಕೇರಳ, ತಮಿಳುನಾಡು, ಮಹಾರಾಷ್ಟç ಮತ್ತು ಕರ್ನಾಟಕದ ೪೨ ಪ್ರತಿನಿಧಿಗಳು ಈ ಮಹತ್ವದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು, ಐಐಟಿ ಕಾನ್ಪುರ, ಐಐಟಿ ಖರಗ್‌ಪುರ, ಎನ್‌ಐಟಿ ಜಲಂಧರ್, ಎಚ್‌ಎಎಲ್ ಬೆಂಗಳೂರು ಮತ್ತು ದೇಶದ ಇತರ ಪ್ರಮುಖ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಪ್ರೊ. ತಿಮ್ಮಯ್ಯ ಎಜಿ ಸ್ವಾಗತಿಸಿ, ಸಹಸಂಯೋಜಕ ಡಾ. ಕಿಶನ್ ಕರುಂಬಯ್ಯ ಬಿಜೆ ಎಫ್‌ಡಿಪಿ ವರದಿ ಮಂಡಿಸಿದರು. ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಜ್ಞಾನೇಶ್ ಎಂ. ವಂದಿಸಿ, ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಮುತ್ತಣ್ಣ ಕೆ.ಪಿ. ನಿರೂಪಿಸಿದರು.