ವೀರಾಜಪೇಟೆ, ಜ. ೧೨: ೩೦೦ ವರ್ಷಗಳಿಗೂ ಹಿಂದಿನ ವಾಯತೂರು ಕಲಿಯಾರ್ ಶಿವಕ್ಷೇತ್ರವು ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಕೇರಳ-ಕರ್ನಾಟಕ ಗಡಿಯಲ್ಲಿರುವ ವಾಯತೂರು ಉಳಿಕ್ಕಲ್ (ಇರಿಟ್ಟಿ ಪಟ್ಟಣ ಕಣ್ಣೂರು ಜಿಲ್ಲೆಯಿಂದ ೭ ಕಿಲೋಮೀಟರ್) ನಲ್ಲಿರುವ ವಾಯತೂರು ಕಲಿಯಾರ್ ದೇವಾಲಯವು ಎರಡು ವಿಭಿನ್ನ ಸಂಸ್ಕöÈತಿಗಳ ನಡುವಿನ ಬಾಂಧವ್ಯದ ಸಂಕೇತವಾಗಿದೆ. ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಡುವೆ ಪುರಾತನ ಕಾಲದಿಂದಲೂ ಅವಿನಾಭಾವ ಸಂಬAಧಕ್ಕೆ ಬೈತೂರು ಹಬ್ಬವೂ ಸಾಕ್ಷಿಯಾಗಿದೆ.
ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ಬಳಿಯ ಉಳಿಕ್ಕಲ್ನಲ್ಲಿರುವ ವಾಯತ್ತೂರ್ ಕಲಿಯಾರ್ ಶಿವ (ಬೈತೂರಪ್ಪ) ದೇವಸ್ಥಾನದ ವಾರ್ಷಿಕ ಉತ್ಸವಗಳು ತಾ. ೧೩ ರಿಂದ (ಇಂದಿನಿAದ) ೨೬ ರವರೆಗೆ ನಡೆಯಲಿದೆ ಇಲ್ಲಿನ ವಾಯತೂರು ನದಿ ಕೊಡಗಿನಲ್ಲಿ ಪ್ರಾರಂಭವಾಗಿ ಪರಿಕ್ಕಲಂ ಮತ್ತು ನುಚ್ಯಾದ್ ಗ್ರಾಮಗಳ ಮೂಲಕ ಹರಿಯುತ್ತದೆ.
ಬೈತೂರಪ್ಪ ದೇವಸ್ಥಾನದಲ್ಲಿ ತಲೆಮಾರುಗಳಿಂದಲೂ ತಕ್ಕ ಪಾತ್ರವನ್ನು ಕೊಡಗಿನ ಪುಗ್ಗೇರ ಮನೆತನದವರು ನಿರ್ವಹಿಸುತ್ತಿದ್ದಾರೆ. ಈ ದೇವಾಲಯವನ್ನು ಸಾಂಪ್ರದಾಯಿಕವಾಗಿ ಮಲಯಾಳಿ ಮತ್ತು ಕೊಡವ ಸಮುದಾಯಗಳ ಸದಸ್ಯರನ್ನೊಳಗೊಂಡ ಟ್ರಸ್ಟ್ ಆಡಳಿತ ನಡೆಸುತ್ತಿದೆ, ಇದು ಕಣ್ಣೂರು ಜಿಲ್ಲೆ ಮತ್ತು ನೆರೆಯ ಕೊಡಗಿನ ಗಡಿಯಾಚೆಗಿನ ಜನರ ನಡುವಿನ ನಿರಂತರ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಹಬ್ಬದ ಸಮಯದಲ್ಲಿ ಎತ್ತ್ ಪೋರಾಟ್ ಒಂದು ಪ್ರಮುಖ ಆಚರಣೆಯಾಗಿದೆ. ಬೈತೂರಪ್ಪ ಎಂದು ಕರೆಯುವ ಶ್ರೀ ವಾಯತೂರು ಕಲಿಯಾರ್ (ಶಿವ)ಗೆ ಅಕ್ಕಿಯನ್ನು ಅರ್ಪಿಸಲಾಗುತ್ತದೆ.
ವಾಯತೂರು ಕಲಿಯಾರ್ ದೇವಾಲಯದ `ಊಟ್ಟುಲ್ಸವಂ’ (ಊಟ್ ಹಬ್ಬ) ಉತ್ಸವವು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ೮ ರಿಂದ ೨೭ ನೇ ತಾರೀಖಿನವರೆಗೆ (ಮುಖ್ಯ ಹಬ್ಬ ೨೪, ೨೫ ಮತ್ತು ೨೬) ನಡೆಯುತ್ತದೆ. ಹಿಂದಿನಿAದಲೂ ತಕ್ಕಾಮೆ ಸೇವೆಯನ್ನು ಕೊಡಗಿನಲ್ಲಿ ನಿರ್ದಿಷ್ಟ ಕುಟುಂಬವಾದ ಪುಗ್ಗೇರ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ.
ಈ ಕುಟುಂಬ ಸದಸ್ಯರು ‘ಊಟ್ಟುಲ್ಸವಂ’ದಲ್ಲಿ ಹಾಜರಿರಬೇಕು ಮತ್ತು ಈ ಉತ್ಸವವು ಕೊಡಗಿನ ಜನರಿಗೆ ಮತ್ತು ಕೊಡಗಿನಲ್ಲಿರುವ ದೇವರುಗಳಿಗೆ ಸಂಬAಧಿಸಿದ್ದು ಅಲ್ಲದೆ ಈಶ್ವರ (ಶಿವ) ಇಡೀ ಪಿತಾಮಹ ಎನಿಸಿಕೊಂಡಿದ್ದಾರೆ. ಈ ಉತ್ಸವದಲ್ಲಿ ಕೊಡಗಿನಿಂದ ಹೆಚ್ಚಿನ ಸಂಖ್ಯೆಯ ಭಕ್ತರು ತೆರಳುತ್ತಾರೆ.
ದಂತಕಥೆಗಳು
ಕೊಡಗಿನಿAದ ದೇವಸ್ಥಾನಕ್ಕೆ ಎತ್ತುಗಳ ಬೆನ್ನಿನ ಮೇಲೆ ಅಕ್ಕಿ ಸಾಗಿಸುವ ಮೂಲವನ್ನು ವಿವರಿಸುವ ದಂತಕಥೆಗಳಿವೆ. ದೇವಾಲಯ ಇರುವ ಸ್ಥಳವು, ದೇವಸ್ಥಾನದ ದಂತಕಥೆಯ ಪ್ರಕಾರ, ಶಿವನನ್ನು ಮೆಚ್ಚಿಸಲು ಅರ್ಜುನನು ತಪಸ್ಸು ಮಾಡಿದ ಸ್ಥಳವಾಗಿದೆ ಎಂದು ನಂಬಲಾಗಿದೆ.
ಕಾಣಿಕೆಗಳು
ದೇವಾಲಯದ ಅಧಿಕಾರಿಗಳ ಪ್ರಕಾರ, ಹಬ್ಬದ ಸಮಯದಲ್ಲಿ ವಿವಿಧ ದಿನಗಳಲ್ಲಿ ದೇವಸ್ಥಾನಕ್ಕೆ ವಿವಿಧ ಭಾಗಗಳಿಂದ ಭಕ್ತರಿಂದ ಊಟು ನೈವೇದ್ಯಗಳು ಇರುತ್ತದೆ. ಇಲ್ಲಿ ಕೊಡವರು ನಡೆಸುವ `ದುಡಿಕೊಟ್ಟ್ ಪಾಟ್ ಒಂದು ಪ್ರಮುಖ ದೈವಿಕ, ಸಾಂಸ್ಕöÈತಿಕ ಕಾರ್ಯಕ್ರಮ. ಇದರ ನಂತರ ಕೊಡವ ಪುರುಷರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ನೃತ್ಯ ಮಾಡುತ್ತಾರೆ.
ಜನವರಿ ೨೫ ರಂದು ಮುಖ್ಯ ಹಬ್ಬದ ದಿನಗಳು (ಜನವರಿ ೨೪, ೨೫ ಮತ್ತು ೨೬) ಜಿಲ್ಲೆಯ ವಿವಿಧ ಭಾಗಗಳಿಂದ ತುಪ್ಪವನ್ನು ತರಲಾಗುತ್ತದೆ, ಈ ಆಚರಣೆಯಲ್ಲಿ ಶ್ರೀ ವಾಯತೂರ್ ಕಲಿಯಾರ್ ವಿಗ್ರಹಕ್ಕೆ ತುಪ್ಪ ಹಚ್ಚಲಾಗುತ್ತದೆ. ಆ ದಿನ ಸಾವಿರಾರು ಭಕ್ತರು ದೇವಸ್ಥಾನವನ್ನು ತಲುಪುತ್ತಾರೆ. ಆ ದಿನ ಎಲ್ಲಾ ಭಕ್ತರಿಗೆ ಹಬ್ಬದ ವಾತಾವರಣವಿದ್ದು ದೇವಸ್ಥಾನದ ಉತ್ಸವದ ಸಮಯದಲ್ಲಿ ವೈವಿಧ್ಯಮಯ ಮನರಂಜನೆ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ದೇವರ ದರ್ಶನ
ಕೊಡಗು ಮತ್ತು ಕೇರಳ ಮಧ್ಯೆ ಬಾಂಧವ್ಯದ ಸಂಕೇತವಾದ ಕಣ್ಣೂರಿನ ಉಳಿಕಲ್ ಗ್ರಾಮದ ಶ್ರೀ ಬೈತೂರಪ್ಪ ದೇವಾಲಯದ ಕೋಮರತಚ್ಚನ್ (ದರ್ಶನ ಪಾತ್ರಿ) ಸಂಪ್ರದಾಯದAತೆ ಕೊಡಗಿನ ವಿವಿಧೆಡೆ ಭೇಟಿ ನೀಡಿ ಆಶೀರ್ವದಿಸಿದರು. ಪಂಚೆ, ಕೊರಳಲ್ಲಿ ಹೂವಿನ ಹಾರ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಅಡಕೆ ಹಾಳೆಯಿಂದ ಮಾಡಿದ ವಿಶೇಷ ಛತ್ರಿಯ ನೆರಳಿನಲ್ಲಿ ಆಗಮಿಸಿದ ಕೋಮರತಚ್ಚನ್ ಸಾರ್ವಜನಿಕರ ಗಮನ ಸೆಳೆಯುತ್ತಾರೆ.
ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಈ ದೇವಸ್ಥಾನದ ತಕ್ಕಮುಖ್ಯಸ್ಥರಾಗಿ ಕೊಡಗಿನ ಪುಗ್ಗೇರ ಕುಟುಂಬಸ್ಥರು ಕರ್ತವ್ಯ ನಿರ್ವಹಿಸುತ್ತಿರುವುದು ವಿಶೇಷ. ಹಾಗಾಗಿ ಕೋಮರತಚ್ಚನ್ ಕೊಡಗಿನ ವಿವಿಧ ದೇವಾಲಯಗಳು, ಮಡಿಕೇರಿ ಕೋಟೆ, ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಜಿಲ್ಲಾ ಖಜಾನೆಗೆ ಭೇಟಿ ನೀಡುವ ಸಂಪ್ರದಾಯ ರಾಜರ ಆಡಳಿತ ಕಾಲದಿಂದಲೇ ನಡೆದುಬಂದಿತ್ತು. ಪ್ರಾಕÊತಿಕ ವಿಕೋಪ ಸಂದರ್ಭ ನಿಂತುಹೋಗಿದ್ದ ಈ ಸಂಪ್ರದಾಯ ೨೦೧೯ರಿಂದ ಮತ್ತೆ ಮುಂದುವರೆಸಿಕೊAಡು ಬರಲಾಗುತ್ತಿದೆ. ಕೋಮರತಚ್ಚನ್ ಭೇಟಿ ಸಂದರ್ಭ ಪುಗ್ಗೇರ ಕುಟುಂಬಸ್ಥರು ಇರುತ್ತಾರೆ.
ಒಟ್ಟು ೧೧ ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಕೊಡಗಿನವರು ಮೂರು ದಿನ ಪಾಲ್ಗೊಳ್ಳುತ್ತಾರೆ. ಮೊದಲ ದಿನ ದೇವರಿಗೆ ವಿಶೇಷ ಪೂಜಾ ಕಾರ್ಯ ನಡೆದ ತಕ್ಷಣ ಸ್ಥಳೀಯ ಚಂಡೆ ವಾದ್ಯದೊಂದಿಗೆ ಆನೆಯ ಮೇಲೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತದೆ.
ಮೊದಲ ದಿನ ಆಗಮಿಸುವ ಕೊಡಗಿನ ಭಕ್ತರು ಹಾಗೂ ವೃತಧಾರಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ಎಲ್ಲಾ ದೇವಾತಾಕಾರ್ಯ ಮುಗಿಸಿ ಮರಳುತ್ತಾರೆ. ಇಲ್ಲಿ ದೈವ ದರ್ಶನವೂ ಇರುತ್ತದೆ. ಮೈಮೇಲೆ ದೇವರ ಆವಾಹನೆಯಾಗುವವರು ಮೊದಲು ಇಲ್ಲಿಗೆ ಬರುವ ಪ್ರತೀತಿ ಇದೆ. ಇಲ್ಲಿ ದೈವ ದರ್ಶನ ಆದಮೇಲೆ ಯಾವ ದೈವದರ್ಶನ ಆಗುತ್ತಿಇರುವುದು ಎನ್ನುವ ಖಾತ್ರಿ ಮಾಡಿಕೊಳ್ಳಲಾಗುತ್ತದೆ. ಉತ್ಸಹವಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೆ ಇಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.