ವೀರಾಜಪೇಟೆ, ಜ. ೧೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ತಾಲೂಕು, ಪೊನ್ನಂಪೇಟೆ ವಲಯದ ಶ್ರೀಮಂಗಲ ಕಾರ್ಯಕ್ಷೇತ್ರದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ವಾಣಿಜ್ಯ ನರ್ಸರಿ ರಚನೆ ಮಾಹಿತಿ ಕಾರ್ಯಕ್ರಮ ಶ್ರೀಮಂಗಲದ ಶ್ರೀ ಕನ್ನಂಬಾಡಿ ಅಮ್ಮ ನರ್ಸರಿಯಲ್ಲಿ ನಡೆಯಿತು.
ನರ್ಸರಿ ಮಾಲೀಕ ವಿಜಯ ಮಾತನಾಡಿ, ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ, ಕಿತ್ತಳೆ, ನಿಂಬೆ ಬೆಳೆಗಳನ್ನು ತೋಟದಲ್ಲಿ ಬೆಳೆಯುವುದರಿಂದ ಕುಟುಂಬದ ಆದಾಯದ ಜೊತೆಗೆ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಸಂತ, ಶ್ರೀಮಂಗಲ ಒಕ್ಕೂಟದ ಅಧ್ಯಕ್ಷೆ ಬಿ.ಡಿ ಮೀನಾ, ಪದಾಧಿಕಾರಿಗಳಾದ ಮೀನಾಕ್ಷಿ, ಕಿಶಾನ್, ಹೇಮಾವತಿ ಸೇವಾ ಪ್ರತಿನಿಧಿಗಳಾದ ಸರಳ, ಗೀತಾ ಪ್ರಗತಿಪರ ಕೃಷಿಕರು, ಸಂಘದ ಸದಸ್ಯರು ಇದ್ದರು.