ರೂ.೪೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತದೆ. ರಾಜ್ಯಸಭೆ ಸದಸ್ಯ ಅಜಯ್ ಮಾಕನ್ ಅವರು ಕ್ರೀಡಾ ಸಂಕೀರ್ಣಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.ರಾಜ್ಯಸಭೆ ಸದಸ್ಯರಿಗೆ ಪ್ರತಿವರ್ಷ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ವಿನಿಯೋಗಿಸಲು ನೀಡುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಕೊಡಗಿನಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲು ಒದಗಿಸುವುದಾಗಿ ಅಜಯ್ ಮಾಕನ್ ಈಗಾಗಲೇ ಘೋಷಿಸಿದ್ದಾರೆ.

ಮುಂದಿನ ಮುಂಗಡ ಪತ್ರದಲ್ಲಿ ರೂ.೧೫ ಕೋಟಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಗಮನ ಸೆಳೆಯಲಾಗುತ್ತದೆ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗುವುದು.

- ಎ.ಎಸ್.ಪೊನ್ನಣ್ಣ, ಶಾಸಕರು