ಕುಶಾಲನಗರ, ಜ. ೧೩: ಕೊಡಗು ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹಾಗೂ ಅವಮಾನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬAಧಿಸಿದAತೆ, ಕೊಡಗು ಅಭಿವೃದ್ಧಿ ಸಮಿತಿಯ ವತಿಯಿಂದ ಕುಶಾಲನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಒಂದು ಲಿಂಕ್ ಅನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗುತ್ತಿದೆ. ಅದರಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು, ಮಡಿಕೇರಿ ಮಹಿಳೆಯರು ಮತ್ತು ಯುವತಿಯರು ಹಣಕ್ಕೆ ಲಭ್ಯ ಎಂಬ ಅಶ್ಲೀಲ, ಸುಳ್ಳು ಹಾಗೂ ಅತ್ಯಂತ ಅವಮಾನಕಾರಿ ಆರೋಪಗ ಳನ್ನು ಮಾಡಲಾಗುತ್ತಿದೆ. ಕೊಡಗಿನ ಮಹಿಳೆಯರ ಮಾನ-ಮರ್ಯಾದೆಗೆ ಧಕ್ಕೆ ಉಂಟುಮಾಡಿದ್ದು ಕೊಡಗು ಜಿಲ್ಲೆಯ ಗೌರವಕ್ಕೆ ಮಸಿ ಬಳಿಯುವ ಕೃತ್ಯವಾಗಿದೆ. ಸಂಬAಧಿಸಿದ ಫೇಸ್ ಬುಕ್ ಖಾತೆ ಹಾಗೂ ಪೋಸ್ಟ್ ಅನ್ನು ಪರಿಶೀಲಿಸಿ, ಕಿಡಿಗೇಡಿಯನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಭವಿಷ್ಯದಲ್ಲಿ ಇಂತಹ ಕೃತ್ಯ ಜರುಗದಂತೆ ಕ್ರಮವಹಿಸಲು ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾ ಅಧ್ಯಕ್ಷ ಪ್ರಸನ್ನ ಭಟ್ ದೂರಿನಲ್ಲಿ ಕೋರಿದ್ದಾರೆ.