ವೀರಾಜಪೇಟೆ, ಜ. ೧೬: ಸಮಾಜದಲ್ಲಿ ತಂಬಾಕು ಸೇವನೆ ಪ್ರತಿಷ್ಠೆ ಹಾಗೂ ಗೌರವದ ಪ್ರತೀಕವೆಂಬAತೆ ಬಿಂಬಿತವಾಗುತ್ತಿರುವುದರಿAದ ಯುವ ಜನತೆ ಹೆಚ್ಚಾಗಿ ತಂಬಾಕು ಉತ್ಪನ್ನಗಳ ಕಡೆ ಆಕರ್ಷಿತರಾಗುತ್ತಿರುವುದು ಕಳವಳಕಾರಿ ಎಂದು ಆಶೀರ್ವಾದ ಆಸ್ಪತ್ರೆಯ ವೈದ್ಯರಾದ ಡಾ. ಚೇಂದಿರ ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ವತಿಯಿಂದ ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಸಭಾಭವನದಲ್ಲಿ ನಡೆದ ತಂಬಾಕು ಮುಕ್ತ ಸಮಾಜ ಜಾಗೃತಿ ಕಾರ್ಯಕ್ರಮ ಹಾಗೂ ಕೃತಕ ಕಾಲು ಜೋಡಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಒತ್ತಡದ ಜೀವನ, ಹೊಸತನ ಮುಂತಾದ ಕಾರಣದಿಂದಾಗಿ ವಿವಿಧ ರೀತಿಯ ತಂಬಾಕು ಉತ್ಪನ್ನಗಳ ಸೇವನೆ ಆರಂಭವಾಗುತ್ತಿದೆ. ೧೮ ರಿಂದ ೨೫ ವರ್ಷದೊಳಗಿನ ಯುವ ಜನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವುದರೊಂದಿಗೆ ಜೀವನವನ್ನು ಕೂಡ ಹಾಳು ಮಾಡಿಕೊಳ್ಳುವುದರತ್ತ ಸಾಗುತ್ತಿದ್ದಾರೆ ಎಂದರು.

ಸಂತ ಅನ್ನಮ್ಮ ಚರ್ಚ್ನ ಬ್ರದರ್ ಜಯಂತ್ ಮಾತನಾಡಿ, ತಂಬಾಕು ಸೇವನೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾನಿ ಮಾಡುತ್ತದೆ. ಆದಷ್ಟು ವ್ಯಸನಕ್ಕೆ ಒಳಗಾದವರನ್ನು ವ್ಯಸನ ಮುಕ್ತರನ್ನಾಗಿ ಮಾಡಲು ಪ್ರಯತ್ನ ಮಾಡಬೇಕೆಂದರು.

ಸAತ ಅನ್ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್ ಮಾತನಾಡಿ, ದುಶ್ಚಟಗಳು ಎಳೆಯ ವಿದ್ಯಾರ್ಥಿಗಳಲ್ಲಿ ಎಂದಿಗೂ ಬೆಳೆಯಬಾರದು. ಪ್ರತಿದಿನ ಸಮಾಜದಲ್ಲಿ ವಿವಿಧ ರೀತಿಯ ತಂಬಾಕು ಉತ್ಪನ್ನಗಳನ್ನು ಹಲವರು ಸೇವಿಸುವುದನ್ನು ನಾವು ನೋಡುತ್ತಿದ್ದೇವೆ. ಅದರ ಸೇವನೆಯಿಂದ ಉಂಟಾಗುವ ಪರಿಣಾಮವನ್ನು ಅರಿತು ಆದಷ್ಟು ತಂಬಾಕು ಸೇವನೆಯಿಂದ ದೂರವಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ನಾವೆಲ್ಲಾ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿದ್ದ ತಿಂಡಿ ತಿನಿಸುಗಳನ್ನು ಕದ್ದು ತಿನ್ನುತ್ತಿದ್ದೆವು. ಆದರೆ ಇತ್ತೀಚಿನ ಯುವ ಸಮೂಹ ತಮ್ಮ ಮನೆಯಲ್ಲಿ ಹಾಗೂ ಹೊರಗೆ ಹಣ, ಆಭರಣ, ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು ಇದಕ್ಕೆ ಮುಖ್ಯ ಕಾರಣ ತಂಬಾಕು ಸೇವನೆ. ಯಾವಾಗ ತಂಬಾಕು ಸೇವನೆಗೆ ಬೇಕಾದಂತಹ ಹಣ ಅವರ ಬಳಿ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಹಣ ಸಂಪಾದನೆಗೆ ಈ ರೀತಿಯ ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಾರೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ವೀರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಪ್ರಮೋದ್, ಸಮಾಜ ಸೇವಕ ಚೋಕಂಡ ಸಂಜು, ರಾಷ್ಟೀಯ ಮಹಿಳಾ ಆಯೋಗದ ಸಲಹೆಗಾರ, ಸಂಪನ್ಮೂಲ ವ್ಯಕ್ತಿ ಪಿ.ಎಸ್ ಶರತ್ ಮಾತನಾಡಿದರು.

ಇದೇ ಸಂದರ್ಭ, ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಮರದ ಕಾಲುಗಳ ಮೂಲಕ ದೈನಂದಿನ ಚಟುವಟಿಕೆಗಳನ್ನು ನಡೆಸಲು ಕಷ್ಟಪಡುತ್ತಿದ್ದ ಧನೇಶ್ ಅವರಿಗೆ ದಾನಿಗಳಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಪೊಯ್ಯೇಟಿರ ಚಂಗಪ್ಪ, ಮಾಳೇಟಿರ ದೇವಯ್ಯ, ಮುಕ್ಕಾಟಿರ ಬೋಪಣ್ಣ, ಸಮಾಜ ಸೇವಕ ಚೋಕಂಡ ಸಂಜು, ಹಿಂದೂ ಮಲಯಾಳಿ ಅಸೋಸಿಯೇಷನ್‌ನ ಜಿಲ್ಲಾ ಕಾರ್ಯದರ್ಶಿ, ಆರೆಂಜ್ ಕೌಂಟಿ ಸಂಸ್ಥೆ, ಕೊಡಗು ಮಲಯಾಳಿ ನಿಧಿ ಬ್ಯಾಂಕ್, ವೀರಾಜಪೇಟೆಯ ದಾನಿಗಳು ಮತ್ತು ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಸದಸ್ಯರ ಸಹಕಾರದಿಂದ ಸುಮಾರು ೨.೨೫ ಲಕ್ಷದ ಕಾರ್ಬನ್ ಫೈಬರ್ ಪಾದ, ಸಿಲಿಕಾನ್ ಲೀನಿಯರ್ ಮತ್ತು ಸಾಕೆಟ್‌ನೊಂದಿಗೆ ಹೈಟೆಕ್ ಪ್ರಾಸ್ಟೆಸಿಸ್‌ನ ಕೃತಕ ಕಾಲನ್ನು ಡಾ. ತ್ಯಾಗರಾಜ್ ಅಳವಡಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟೀಯ ಮಹಿಳಾ ಆಯೋಗದ ಸಲಹೆಗಾರ ಪಿ.ಎಸ್ ಶರತ್ ಧನೇಶ್ ಅವರಿಗೆ ಲ್ಯಾಪ್‌ಟಾಪ್ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಇವಾಲ್ವ್ ಬ್ಯಾಕ್ ರೆಸಾರ್ಟ್ನ ವಸಂತಕುಮಾರ್, ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಟೀನಾ ಫರ್ನಾಂಡಿಸ್, ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಪಿರಶೀದ್, ಸಹಾರ ಫ್ರೆಂಡ್ಸ್ ತಂಡದ ರಾವುಫ್, ವೀರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಲತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಸದಸ್ಯರು, ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್‌ನ ಸದಸ್ಯರು, ಸಂತ ಅನ್ನಮ ಪ್ರೌಢಶಾಲೆಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.