ಸೋಮವಾರಪೇಟೆ, ಜ. ೧೭: ತಾಲೂಕಿನ ನಂದಿಗುAದ ಗ್ರಾಮದ ಲೈನ್ ಮನೆಯಲ್ಲಿ ವಾಸವಾಗಿದ್ದ ಬಳ್ಳಾರಿ ಜಿಲ್ಲೆಯ, ನಾಗತಿ ಬಸಾಪುರ ಕೊಮಾರನಳ್ಳಿ ಗ್ರಾಮ ನಿವಾಸಿ ಮಲ್ಲನಾಯಕ (೩೬) ನಾಪತ್ತೆಯಾಗಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲನಾಯಕನ ಪತ್ನಿ ಲಕ್ಷಿö್ಮ ಬಾಯಿ, ಠಾಣೆಯಲ್ಲಿ ದೂರು ನೀಡಿದ್ದು, ಜ. ೩ ರಂದು ನಂದಿಗುAದ ಗ್ರಾಮದ ಲೈನ್‌ಮನೆಯಿಂದ ಸಂತೆಯಿAದ ದಿನಸಿ ತರುವುದಾಗಿ ಹೋದವರು ವಾಪಾಸ್ಸು ಮನೆಗೆ ಬಂದಿಲ್ಲ. ನಂತರ ಫೋನ್ ಸ್ವಿಚ್‌ಆಪ್ ಆಗಿದೆ, ಪತ್ತೆಹಚ್ಚಿಕೊಡಿ ಎಂದು ಮನವಿ ಮಾಡಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.