ಮಡಿಕೇರಿ ಜ.೧೯ : ಮಡಿಕೇರಿ ನಗರಸಭಾ ವ್ಯಾಪ್ತಿಯ ತ್ಯಾಗರಾಜ ಕಾಲೋನಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದ್ದಾರೆ.
ನಗರಸಭಾ ಸದಸ್ಯ ಮಹಮ್ಮದ್ ಯಾಕುಬ್ ಎಂ.ಎA ಅವರ ನೇತೃತ್ವದಲ್ಲಿ ಸೋಮವಾರಪೇಟೆಯಲ್ಲಿ ಶಾಸಕರನ್ನು ಭೇಟಿಯಾದ ವಾರ್ಡ್ ಸಂಖ್ಯೆ ೩ರ ತ್ಯಾಗರಾಜ ಕಾಲೋನಿ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಅಭಿವೃದ್ಧಿ ಕಾರ್ಯ ಮತ್ತು ಪಕ್ಷ ಸಂಘಟನೆಯ ಕುರಿತು ಚರ್ಚಿಸಿದರು. ಬೂತ್ ಅಧ್ಯಕ್ಷÀ ಹಸೇನ್, ಕಾರ್ಯದರ್ಶಿ ಸುಹೇಲ್, ಸದಸ್ಯರಾದ ಆಸೀಫ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.