ಮಡಿಕೇರಿ, ಜ. ೧೯: ಜಿಲ್ಲೆಯಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನು ಖಂಡಿಸಿ ತಾ. ೨೭ ರಂದು ಸಿದ್ದಾಪುರದಲ್ಲಿ ಜನಾಕ್ರೋಶ ಸಭೆಯನ್ನು ನಡೆಸಲಾಗುತ್ತಿದೆ ಎಂದು ಹಿಂದೂ ಸುರಕ್ಷಾ ಸಮಿತಿ ಪ್ರಮುಖರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಯೋಜಕ ಕುಕ್ಕೇರ ಅಜಿತ್, ಭಾರತ ದೇಶವನ್ನು ಇಸ್ಲಾಮೀಕರಣ ಮಾಡುವ ದುರುದ್ದೇಶದಿಂದ ಹಿಂದೂ ಯುವತಿಯರನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ನಂಬಿಸಿ ಲವ್ ಜಿಹಾದ್ಗೆ ಒಳಪಡಿಸಲಾಗುತ್ತಿದೆ. ಈ ರೀತಿಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಿಂದೂ ಸಮಾಜವನ್ನು ಮುಗಿಸುವ ಹುನ್ನಾರ ಇದರ ಹಿಂದಿದೆ. ವಶೀಕರಣದ ಮೂಲಕ ಹಿಂದೂ ಯುವತಿಯರನ್ನು ಸೆಳೆದು ಲವ್ ಜಿಹಾದ್ ಮಾಡಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವ ಗುಮಾನಿಯೂ ಇದೆ ಎಂದು ಆರೋಪಿಸಿದರು.
ಲವ್ ಜಿಹಾದ್ಗೆ ತುತ್ತಾದ ಯುವತಿಯರು ಭಯೋತ್ಪಾದನಾ ಸಂಘಟನೆಯಲ್ಲಿ ಗುರುತಿಸಿಕೊಂಡ ಉದಾಹರಣೆಗಳು ಕಣ್ಣಮುಂದಿವೆ. ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಪ್ರಯತ್ನ ಇದಾಗಿದೆ. ಕೇರಳ ರಾಜ್ಯದಲ್ಲಿ ೨೦೦೯ರಿಂದ ಈಚೆಗೆ ೫ ಸಾವಿರಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣ ನಡೆದಿದ್ದು, ಕೊಡಗು ಜಿಲ್ಲೆಯಲ್ಲಿ ಈ ರೀತಿ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದ್ದು, ಸಿದ್ದಾಪುರ, ನೆಲ್ಲಿಹುದಿಕೇರಿ ಭಾಗದಲ್ಲಿ ಹಲವು ಲವ್ ಜಿಹಾದ್ ಘಟನೆಗಳು ನಡೆದಿವೆ. ಇದನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತಾ. ೨೭ ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಸಾಗಿ ೧೧.೩೦ಕ್ಕೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಜನಾಕ್ರೋಶ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಹಸಂಯೋಜಕ ಸಂತೋಷ್ ಕುಶಾಲನಗರ ಮಾತನಾಡಿ, ಗುಡ್ಡೆಹೊಸೂರಿನ ಯುವತಿ ಅನ್ಯಧರ್ಮಿಯನನ್ನು ಮದುವೆಯಾಗಿ ಮತಾಂತರವಾಗಿ ಬಳಿಕ ಅಂತರರಾಷ್ಟಿçÃಯ ಭಯೋತ್ಪಾದಕ ಸಂಘಟನೆಯೊAದಿಗೆ ಭಾಗಿಯಾಗಿರುವುದು ಎನ್ಐಎ ತನಿಖೆಯಿಂದ ಬಹಿರಂಗಗೊAಡಿದೆ. ಲವ್ ಜಿಹಾದ್ ಸಮಾಜಕ್ಕೆ ಮಾರಕವಾಗಿದ್ದು, ಪೋಷಕರು ಮಕ್ಕಳ ಚಲನವಲನದ ಮೇಲೆ ನಿಗಾಯಿಡಬೇಕೆಂದು ಹೇಳಿದರು.
ಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಐನಂಡ ಲಾಲಾ ಅಯ್ಯಣ್ಣ, ವೈ.ಪಿ. ಭೋಜೇಗೌಡ, ಟಿ.ಎ. ಕುಮಾರ್, ಪುದಿಯೊಕ್ಕಡ ರಮೇಶ್ ಹಾಜರಿದ್ದರು.