ವೀರಾಜಪೇಟೆ, ಜ. ೨೪: ಪೋಕ್ಸೊ ಕಾಯ್ದೆವೊಂದಕ್ಕೆ ಸಂಬAಧಿಸಿದAತೆ ಪ್ರಕರಣ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜ್ ಅವರು, ಸಾಕ್ಷö್ಯಧಾರದ ಕೊರತೆ ಹಿನ್ನಲೆ ಆರೋಪಿಯನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಟೂರು ಗ್ರಾಮದ ಕಾಫಿ ತೋಟದ ಲೈನ್‌ಮನೆಯೊಂದರಲ್ಲಿ ವಾಸವಾಗಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದ ಪಣಿ ಯರವರ ಕಣ್ಣನ್ ಎಂಬಾತ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆ ಗರ್ಭ ಧರಿಸಲು ಕಾರಣನಾಗಿದ್ದ ಎಂಬ ಆರೋಪದಡಿ ಕಣ್ಣನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಸಂಬAಧ ವಿಚಾರಣೆ ನಡೆಸಿದ ನ್ಯಾಯಾಲಯ ಸೂಕ್ತ ಸಾಕ್ಯಾö್ಯಧಾರದ ಕೊರತೆ ಹಿನ್ನಲೆಯಲ್ಲಿ ಕಣ್ಣನ್ ವಿರುದ್ಧ ದಾಖಲಾದ ಪ್ರಕರಣವನ್ನು ವಜಾಗೊಳಿಸಿ ಆದೇಶ ನೀಡಿದೆ. ಆರೋಪಿ ಪರ ವೀರಾಜಪೇಟೆಯ ಹಿರಿಯ ವಕೀಲ ಕಾನೂನು ನೆರವು ಸಮಿತಿಯ ಸದಸ್ಯ ಕೀತಿಯಂಡ ಪ್ರದ್ಯುಮ್ನ ವಾದಿಸಿದ್ದರು.