ಮುಳ್ಳೂರು, ಜ. ೨೭: ಸಮೀಪದ ಆಲೂರು-ಸಿದ್ದಾಪುರದ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್ಗಾರ್ಟನ್ ನರ್ಸರಿ ಶಾಲೆಯ ವಾರ್ಷಿಕೋತ್ಸವ ಸಾಂಸ್ಕೃತಿಕ ಹಬ್ಬ ೨೦೨೫-೨೬ ಮತ್ತು ಪೋಷಕರ ಕ್ರೀಡೋತ್ಸವ ಸಂಭ್ರಮದಿAದ ನಡೆಯಿತು.
ದಿನದ ಮಹತ್ವ ಕುರಿತು ನರ್ಸರಿ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಮತ್ತು ಮುಖ್ಯ ಶಿಕ್ಷಕಿ ಕೆ.ಪಿ. ರೀನಾ ಪ್ರಾಸ್ತಾವಿಕವಾಗಿ ಮಾತನಾಡಿ, ನರ್ಸರಿ ಹಂತದ ಮಕ್ಕಳಲ್ಲಿ ಪ್ರಾರಂಭದಲ್ಲೆ ಅಕ್ಷರ ಜ್ಞಾನ, ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಕನ್ನಡ ಮತ್ತು ಆಂಗ್ಲ ಭಾಷೆ ಕಲಿಯಲು ಪ್ರೋತ್ಸಾಹಿಸುವ ಸಲುವಾಗಿ ನರ್ಸರಿ ಹಂತದ ಶಾಲೆಯನ್ನು ತೆರೆಯಲಾಗಿದೆ. ನರ್ಸರಿ ಹಂತದ ಮಕ್ಕಳು ಇವುಗಳನ್ನು ಕಲಿತುಕೊಂಡರೆ ಪ್ರಾಥಮಿಕ ಹಂತದ ಶಾಲೆಯಲ್ಲಿ ಮಕ್ಕಳಿಗೆ ಕಲಿಕೆಗೆ ಮತ್ತು ಮಕ್ಕಳ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದ ಅವರು, ಕಲಿಕೆಯ ಜೊತೆಯಲ್ಲಿ ಮಕ್ಕಳನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ರೋಟರಿ ಕ್ಲಬ್ ಸದಸ್ಯ ಮತ್ತು ಸಮಾಜ ಸೇವಕ ಎ.ಎಸ್. ರಾಮಣ್ಣ ಮಾತನಾಡಿ, ನರ್ಸರಿ ಹಂತದ ಮಕ್ಕಳಿಗೆ ಕಲಿಕೆಗೆ ಪೂರಕವಾಗುವ ಉದ್ದೇಶದಿಂದ ನರ್ಸರಿ ಶಾಲೆಯು ಶಾಲಾ ವಾರ್ಷಿಕೋತ್ಸವ, ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಕ್ರೀಡಾಕೂಟಗಳಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನಿಯ ಎಂದರು.
ಕಾರ್ಯಕ್ರಮದಲ್ಲಿ ಪ್ಯಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಲೀಲಾಕುಮಾರ್, ಗ್ರಾ.ಪಂ. ಸದಸ್ಯರಾದ ದಮಯಂತಿ ಕರುಂಬಯ್ಯ, ಪಿ.ಎಸ್. ಸತೀಶ್ಕುಮಾರ್, ನಿವೃತ್ತ ಶಿಕ್ಷಕಿ ಹೆಚ್.ಎನ್. ರಾಗಿಣಿ ಮುಂತಾದವರು ಹಾಜರಿದ್ದರು. ಶಾಲಾ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳ ಪೋಷಕರಿಗೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.