ಮಡಿಕೇರಿ, ಜ. ೨೮: ಗಣರಾಜ್ಯೋತ್ಸವದ ಅಂಗವಾಗಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಮೂಲಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಳಿಬೀಡುವಿನ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ಪೌರಾಣಿಕ ಹಿನ್ನೆಲೆಯ ಮಹಾಭಾರತ ನೃತ್ಯ ರೂಪಕ ಎಲ್ಲರ ಗಮನ ಸೆಳೆದವು. ರಾಜರ ಕಾಲದ ಉಡುಗೆ-ತೊಡುಗೆ, ಆಯುಧ, ಚಾಮರದೊಂದಿಗೆ ರಥದ ಚಕ್ರ ತಿರುಗುವಂತೆ, ಕುದುರೆಗಳು ಓಡುವಂತೆ ನಟನೆ ಮೂಲಕ ತೋರಿದ ಪ್ರದರ್ಶನ ನೈಜ ಯದ್ಧ ಭೂಮಿಯ ಚಿತ್ರಣವನ್ನು ಮೂಡಿಸಿತು. ಈ ರೂಪಕವನ್ನು ಮೆಚ್ಚಿ ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ಅವರು ಪ್ರೋತ್ಸಾಹ ಧನ ನೀಡಿ ಪ್ರೋತ್ಸಾಹಿಸಿದರು.ಮರೂರು ಆಶ್ರಮ ಶಾಲಾ ವಿದ್ಯಾರ್ಥಿಗಳು ನೀರಿನ ಕ್ಯಾನ್, ಡಿಶ್ ಬಡಿಯುತ್ತಾ, ಸ್ಥಳದಲ್ಲೇ ಹಾಡುತ್ತಾ., ಜೇನು ಕುರುಬರ ನೃತ್ಯ ಮಾಡಿ ರಂಜಿಸಿದರು. ಇನ್ನುಳಿದಂತೆ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ, ಪಿ.ಎಂ.ಶ್ರೀ ಶಾಲೆ ಹಾಗೂ ಬಾಲಮಂದಿರದ ಮಕ್ಕಳ ತಂಡ, ಸಂತ ಮೈಕಲ್ಲರ ಆಂಗ್ಲ ಮಾಧ್ಯಮ ಶಾಲಾ ತಂಡಗಳು ದೇಶಭಕ್ತಿಯನ್ನು ಹಾಡುಗಳಿಗೆ ನೃತ್ಯ ಮಾಡಿ ಗಮನ ಸೆಳೆದರು.