ಮಡಿಕೇರಿ, ಫೆ. ೨೭: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಇತ್ತೀಚೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರನ್ನು ಭೇಟಿಯಾಗಿ ಕೂಟದ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಕೋರಲಾಯಿತು.
ಕೂಟ ಹಮ್ಮಿಕೊಳ್ಳುವ ಉತ್ತಮ ಕೆಲಸಗಳಿಗೆ ಬೆಂಬಲ ನೀಡುವುದಾಗಿ ಡಿ.ಸಿ. ಸೋಮಶೇಖರ್ ಭರವಸೆ ನೀಡಿದರು. ಎಸ್.ಪಿ. ಬಿಂದುಮಣಿ ಅವರು ಮಾದಕವಸ್ತು ತಡೆಗೆ ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮಗಳಲ್ಲಿ ಕೂಟದವರೂ ಪಾಲ್ಗೊಂಡು ಸಹಕರಿಸಲು ಕೋರಿದರು. ಮಾದಕವಸ್ತು ಬಳಕೆ ತಡೆ ಕಾರ್ಯಚಟುವಟಿಕೆಗಳತ್ತ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಅವರು ಸಲಹೆಯಿತ್ತರು.
ಈ ಸಂದರ್ಭ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ಕಾರ್ಯದರ್ಶಿ ಕೂಪದಿರ ಜೂನಾ ವಿಜಯ್, ಪದಾಧಿಕಾರಿಗಳಾದ ಪಾಲೆಯಡ ರೂಪಾ ಸುಬ್ಬಯ್ಯ, ಮುಂಡೋಟಿರ ರಾಣಿ ಅಪ್ಪಯ್ಯ ಪಾಲ್ಗೊಂಡಿದ್ದರು.