ಮಡಿಕೇರಿ, ಮಾ. ೧: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರು ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ರಿಕ್ಷಾ ನಿಲ್ದಾಣ ಹಾಗೂ ಕಾವೇರಿ ಕಾರು ಚಾಲಕ ಮಾಲೀಕರ ಸಂಘದ ಕಾರು ನಿಲ್ದಾಣಗಳಿಗೆ ೧೧ ಲಕ್ಷ ರೂ ವೆಚ್ಚದ ಸುಸಜ್ಜಿತ ಮೇಲ್ಛಾವಣಿ ಹಾಗೂ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ೧೬ ಲಕ್ಷ ರೂ ವೆಚ್ಚದ ಸುಸಜ್ಜಿತ ಶೌಚಾಲಯದೊಂದಿಗೆ ಹೈಟೆಕ್ ಪ್ರಯಾಣಿಕರ ತಂಗುದಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಎರಡು ಕಾಮಗಾರಿಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲಾಗಿದೆ ಎಂದು ಮಂತರ್ ಗೌಡ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಡಿ.ಹೆಚ್.ಮೇದಪ್ಪ ಮಾತನಾಡಿ ನಮ್ಮ ಸಮಸ್ಯೆಯನ್ನು ಗಮನಿಸಿ ಪರಿಹಾರ ಒದಗಿಸುವ ಕೆಲಸವನ್ನು ಡಾ ಮಂತರ್ ಗೌಡ ಅವರು ಮಾಡಿರುವುದು ಶ್ಲಾಘನೀಯ ಎಂದರು.

ಕಾವೇರಿ ವಾಹನ ಚಾಲಕರು ಮತ್ತು ಮಾಲಿಕರ ಸಂಘದ ಸ್ಥಾಪಕ ಅಧ್ಯಕ್ಷ ಬದ್ದಂಜೆಟ್ಟಿರ ಜೈ ಜಗದೀಶ್ ಮಾತನಾಡಿ ಕಳೆದ ಒಂದೂವರೆ ದಶಕದಿಂದ ಮೇಲ್ಛಾವಣಿ ಹಾಕಿಸಲು ಪ್ರಯತ್ನ ಪಟ್ಟಿದ್ದು ಈಗ ಶಾಸಕರ ಕಾಳಜಿಯಿಂದ ಕನಸು ನನಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮಡಿಕೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಮದ್ ಹಾಗೂ ಕಾವೇರಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸತೀಶ್ ಬಿ.ಜೆ. ಅವರು ನಾಗರಿಕರ ಪರವಾಗಿ ಶಾಸಕರನ್ನು ಸನ್ಮಾನಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಮೆಡಿಕಲ್ ಕಾಲೇಜ್ ಪ್ರಾಂಶುಪಾಲರಾದ ಡಾ ವಿಶಾಲ್, ಜಿಲ್ಲಾ ಸರ್ಜನ್ ಡಾ ನಂಜುAಡಯ್ಯ, ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಬಾರನ ದಿನೇಶ್, ಮುದ್ದಿಯನ ಪ್ರವೀಣ್, ಸುನೀಲ್, ಹನ್ಸಾರ್, ಸುಕುಮಾರ್, ನಾಗರಾಜ್, ಗಣೇಶ್, ಕಾರು ಮಾಲೀಕರ ಸಂಘದ ಪದಾಧಿಕಾರಿಗಳಾದ ಜಪ್ಪು, ಉನೈದ್, ಸಂತೋಷ್, ರಮೇಶ್ ವಿ.ಬಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ವಿ.ಜಿ.ಮೋಹನ್, ಹರಿಪ್ರಸಾದ್, ಕವನ್ ಕೊತ್ತೋಳಿ, ಅರ್ಜುನ್, ಶರಣ್, ಶಶಿ, ಮೀನಾಜ್, ಫ್ಯಾನ್ಸಿ ಪಾರ್ವತಿ, ಮುದ್ದು ರಾಜ್, ಜುಲೇಕಾಬಿ ಸೇರಿದಂತೆ ಸಂಘದ ಸದಸ್ಯರು, ಮೆಡಿಕಲ್ ಕಾಲೇಜ್ ವಿಧ್ಯಾರ್ಥಿಗಳು, ನಾಗರಿಕರು ಹಾಜರಿದ್ದರು.