ಮದೆನಾಡು, ಮಾ. ೧: ಮದೆನಾಡು ಬಳಿಯ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಯುವತಿ ಮೃತಪಟ್ಟ ಘಟನೆಯನ್ನು ಖಂಡಿಸಿದ ಸಾರ್ವಜನಿಕರು, ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರದಂದು ಕಾಡಾನೆ ದಾಳಿಯಿಂದ ೧೯ ವರ್ಷದ ಪೂಜ್ಯ ಎಂಬ ಯುವತಿ ಸಾವನ್ನಪ್ಪಲು ಅರಣ್ಯ ಇಲಾಖೆ ಬೇಜವಾಬ್ದಾರಿ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅರಣ್ಯ ಅಧಿಕಾರಿಗಳ ಸಹಿ ಇಲ್ಲದ ಪರಿಹಾರದ ಚೆಕ್ ಅನ್ನು ಮೃತೆಯ ಕುಟುಂಬಕ್ಕೆ ವಿತರಣೆ ಮಾಡಿರುವುದು ಸರಿಯಲ್ಲ. ಇದರಲ್ಲಿಯೇ ಅರಣ್ಯ ಇಲಾಖೆ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಸಿಸಿಎಫ್ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ನಂತರ ಒಂದು ಗಂಟೆಗಳ ಕಾಲ ಹೆದ್ದಾರಿ ತಡೆದು ಸಿಸಿಎಫ್ ಆಗಮನಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಆನೆ ಉಪಟಳದಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸರಣಿ ದಾಳಿಗಳು ಸಂಭವಿಸಿದೆ. ಆದರೂ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ. ಒಂಟಿ ಸಲಗ ಬೆಟ್ಟತ್ತೂರು ಭಾಗದಲ್ಲಿ ಓಡಾಡುತ್ತಿದ್ದು, ಇದನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಸಿಸಿಎಫ್ ಸೋನಾಲ್ ಮಾತನಾಡಿ, ಆನೆ ಸೆರೆಗೆ ಕೂಂಬಿAಗ್ ನಡೆಯುತ್ತಿದೆ. ಶೀಘ್ರ ಆನೆ ಸೆರೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಿಸಿಎಫ್ ಭರವಸೆ ಹಿನ್ನೆಲೆ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್, ಪ್ರಮುಖರಾದ ಕಿಮ್ಮುಡಿರ ಜಗದೀಶ್, ಆನಂದ ಬೆಟ್ಟತ್ತೂರು ಗ್ರಾಮಸ್ಥರು ಹಾಗೂ ರೈತ ಸಂಘದ ಪ್ರಮುಖರು ಹಾಜರಿದ್ದರು. - ಇಬ್ರಾಹಿಂ