ಸೋಮವಾರಪೇಟೆ, ಮಾ. ೧: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ಹಾಕಿ ಕರ್ನಾಟಕ ಹಾಗೂ ಹಾಕಿ ಕೂರ್ಗ್ ಸಹಕಾರದೊಂದಿಗೆ ಕಳೆದ ನಾಲ್ಕು ದಿನಗಳಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ ಜಿಲ್ಲಾ ಮಟ್ಟದ ದಿ.ರಂಗಸ್ವಾಮಿ ಚೂರಿಗಿಡ್ನ ಸ್ಮಾರಕ ಹಾಕಿ ಪಂದ್ಯಾವಳಿಯಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿನಾಡು ಚಾಂಪಿಯನ್ ಆಗಿ ಹೊರಹೊಮ್ಮಿತು

ಫೈನಲ್ ಪಂದ್ಯಾಟದ ಆರಂಭದಲ್ಲಿಯೇ ರೋಚಕ ಆಟ ಪ್ರದರ್ಶಿಸಿದ ಬೇರಳಿ ನಾಡು ತಂಡ ಅಂತಿಮವಾಗಿ ೨-೧ ಗೋಲುಗಳಿಂದ ಗೆಲುವು ಸಾಧಿಸುವುದರೊಂದಿಗೆ ಪ್ರಥಮ ಸ್ಥಾನದ ಟ್ರೋಫಿಯೊಂದಿಗೆ ರೂ. ೧ ಲಕ್ಷ ನಗದು ಬಹುಮಾನಕ್ಕೆ ಭಾಜನವಾಯಿತು. ಫೈನಲ್‌ನಲ್ಲಿ ರೋಚಕ ಆಟ ಪ್ರದರ್ಶಿಸಿ ಅಂತಿಮ ಕ್ಷಣದಲ್ಲಿ ಸೋಲುಂಡ ಅತಿಥೇಯ ಡಾಲ್ಫಿನ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಫೈನಲ್ ಪರಾಜಿತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ರೂ. ೫೦ ಸಾವಿರ ನಗದು ವಿತರಿಸಲಾಯಿತು.

ಫೈನಲ್ ಪಂದ್ಯಾಟದಲ್ಲಿ ಪ್ರಥಮ ಕ್ವಾರ್ಟರ್‌ನಲ್ಲಿ ಬೇರಳಿನಾಡು ತಂಡದ ಅತಿಥಿ ಆಟಗಾರರಾದ ವೆಂಕಟೇಶ್ ಕೆಂಜ ಮತ್ತು ಅಭಿಷೇಕ್ ಅವರುಗಳು ೨ ಗೋಲುಗಳನ್ನು ಬಾರಿಸುವುದರೊಂದಿಗೆ ಆರಂಭಿಕ ಮುನ್ನಡೆ ದೊರಕಿಸಿಕೊಟ್ಟರು. ನಂತರ ಡಾಲ್ಫೀನ್ಸ್ ತಂಡಕ್ಕೆ ಪೆನಾಲ್ಟಿ ಕಾರ್ನರ್ ದೊರೆತರೂ ಗೋಲು ಗಳಿಸುವಲ್ಲಿ ಆಟಗಾರರು ವಿಫಲರಾದರು. ಡಾಲ್ಫೀನ್ಸ್ ತಂಡದ ಪರವಾಗಿ ಆಡಿದ ಅಂತರರಾಷ್ಟಿçÃಯ ಆಟಗಾರ ಆಭರಣ್ ಸುದೇವ್ ಹಲವಾರು ಪ್ರಯತ್ನಗಳನ್ನು ಮಾಡಿದರಾದರೂ ಹೆಚ್ಚಿನ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಡಾಲ್ಪೀನ್ಸ್ ತಂಡದ ರಕ್ಷಣಾ ಆಟಗಾರ ತ್ರಿಶೂಲ್ ಮತ್ತು ಗೋಲ್ ಕೀಪರ್ ಬೋಪಣ್ಣ ಉತ್ತಮ ಆಟದಿಂದಾಗಿ ಗೋಲು ಗಳಿಸುವ ಎದುರಾಳಿ ತಂಡದಪ್ರಯತ್ನ ವಿಫಲವಾಯಿತು. ಬೇರಳಿನಾಡು ತಂಡದ ಮುನ್ನಡೆ ಆಟಗಾರ, ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರ ಮಹ್ಮದ್ ರಾಹಿಲ್ ಅವರ ಅತ್ಯುತ್ತಮ ಆಟದ ಪ್ರದರ್ಶನದಿಂದ ತಂಡ ಗೆಲುವು ಸಾಧಿಸುವಲ್ಲಿ ಯಶಸ್ಸನ್ನು ಪಡೆಯಿತು. ಪಂದ್ಯಾವಳಿಯ ಮೂರನೇ ಕ್ವಾರ್ಟರ್‌ನ ಮುಕ್ತಾಯ ಹಂತದಲ್ಲಿ ಡಾಲ್ಫೀನ್ಸ್ಗೆ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಲು ವಿಫಲವಾಯಿತು. ಆದರೆ ಕೊನೆಯ ಕ್ವಾರ್ಟರ್ ಆರಂಭವಾಗಿ ಕೊನೆಯ ೨ ನಿಮಿಷ ಇರುವಾಗ ಆಟದ ಗತಿಯೇ ಬದಲಾಯಿತು. ಆ ಸಂದರ್ಭ ಡಾಲ್ಪೀನ್ಸ್ಗೆ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ತಂಡದ ಪ್ರಮುಖ ಆಟಗಾರ ಆಭರಣ್ ಸುದೇವ್ ಆಕರ್ಷಕ ಗೋಲು ಬಾರಿಸುವುದರೊಂದಿಗೆ ಯುಎಸ್‌ಸಿ ಬೇರಳಿನಾಡು ತಂಡಕ್ಕೆ ಆತಂಕವನ್ನುAಟು ಮಾಡಿದರು.

ಕೊನೆಯ ೪೦ ಸೆಕೆಂಡ್‌ಗಳಿರುವಾಗ ಪೆನಾಲ್ಟಿ ಕಾರ್ನರ್ ಡಾಲ್ಫಿನ್ಸ್ ತಂಡಕ್ಕೆ ದೊರೆಯಿತು. ಆ ಕ್ಷಣ ಕೆಲಕಾಲ ಎರಡೂ ತಂಡಗಳ ಆಟಗಾರರು ಮತ್ತು ತೀರ್ಪುಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ತೀರ್ಪುಗಾರರ ತೀರ್ಮಾನದಂತೆ ಡಾಲ್ಫೀನ್ಸ್ ತಂಡಕ್ಕೆ ಪೆನಾಲ್ಟಿ ಕಾರ್ನರ್ ನೀಡಲಾಯಿತು. ಅದರ ಸದುಪಯೋಗವನ್ನು ಬಳಸಿಕೊಳ್ಳಲು ವಿಫಲರಾದ ಡಾಲ್ಫೀನ್ಸ್ ತಂಡ ಕೊನೆಯಲ್ಲಿ ೨-೧ ಗೋಲುಗಳ ಅಂತರದಿAದ ಸೋಲನುಭವಿಸಿತು.

ಮಿಂಚಿದ ಆಟಗಾರರು

ಬೇರಳಿನಾಡು ತಂಡದ ಪ್ರಮುಖ ಆಕರ್ಷಕ ಆಟಗಾರ ಮಹ್ಮದ್ ರಾಹೀಲ್, ಪ್ರಸ್ತುತ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಇಡೀ ಕ್ರೀಡಾಂಗಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಬೇರಳಿನಾಡು ತಂಡದ ಪರವಾಗಿ ರಾಷ್ಟಿçÃಯ ಆಟಗಾರ ವೆಂಕಟೇಶ್ ಕೆಂಜಿ, ಇಂಡಿಯನ್ ಕ್ಯಾಂಪರ್ ಆಕಾಶ್ ಪೂವಣ್ಣ, ಭಾರತ ತಂಡದ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಬಿಪಿನ್, ಅಭಿಷೇಕ್ ಮತ್ತು ಗೋಲ್ ಕೀಪರ್ ಅಂಕಿತ್ ಮಲ್ಲಿಕ್ ಆಕರ್ಷಕ ಆಟ ಪ್ರದರ್ಶಿಸಿದರು.

ಡಾಲ್ಫೀನ್ಸ್ ಪರವಾಗಿ ಅಂತರರಾಷ್ಟಿçÃಯ ಆಟಗಾರ ಸೋಮವಾರಪೇಟೆಯ ಆಭರಣ್ ಸುದೇವ್, ವಚನ್ ಅಶೋಕ್, ರಾಷ್ಟಿçÃಯ ಆಟಗಾರ ಮೂಲತಃ ಸೋಮವಾರಪೇಟೆಯ ತ್ರಿಶೂಲ್, ಗೋಲ್ ಕೀಪರ್ ಸಾಯಿ ತಂಡದ ಆಟಗಾರ ಬೋಪಣ್ಣ, ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಫೈನಲ್ ಪಂದ್ಯಾಟದ ತೀರ್ಪುಗಾರರಾಗಿ ಅಂತರರಾಷ್ಟಿçÃಯ ಹಾಕಿ ತೀರ್ಪುಗಾರರಾದ ದೀಕ್ಷಿತ್ ಹಾಗೂ ಕೀರ್ತಿ ಮುತ್ತಪ್ಪ, ತಾಂತ್ರಿಕ ಟೇಬಲ್‌ನಲ್ಲಿ ಬೊಳ್ಳಚಂಡ ನಾಣಯ್ಯ, ಅಯ್ಯಪ್ಪ, ವಿನೋದ್ ಜೆಸಿಬಿ, ಪೊನ್ನಣ್ಣ, ಸುಪ್ರೀತ್ ಕಾರ್ಯನಿರ್ವಹಿಸಿದರು.

ವಿಜೇತ ಹಾಗೂ ರನ್ನರ್ಸ್ ತಂಡಕ್ಕೆ ಟ್ರೋಫಿ ಹಾಗೂ ನಗದು ದಾನಿಗಳಾದ ಮೂಲತಃ ಸೋಮವಾರಪೇಟೆಯ ಉದ್ಯಮಿ ಬಿ.ಆರ್. ವೇಣು, ವಿನಯ್, ವಿಜಯ್, ಲಲಿತಾ ರಂಗಸ್ವಾಮಿ, ಅಂತರರಾಷ್ಟ್ರೀಯ ಆಟಗಾರರಾದ ಅರ್ಜುನ್ ಹಾಲಪ್ಪ, ವಿಕ್ರಂಕಾAತ್, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ, ಎಸ್.ವಿ.ಸುನಿಲ್, ತರಬೇತುದಾದ ಜನಾರ್ಧನ್, ದೇವದಾಸ್ ವಿತರಿಸಿದರು. ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಮಹೇಶ್, ಗೌರವಾಧ್ಯಕ್ಷ ಹೆಚ್.ಎನ್. ಅಶೋಕ್ ಸೇರಿದಂತೆ ಪದಾಧಿಕಾರಿಗಳು ಪಂದ್ಯಾವಳಿಯನ್ನು ಅಚ್ಚಕಟ್ಟಾಗಿ ಆಯೋಜಿಸಿ, ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.