ಸಿದ್ದಾಪುರ, ಮಾ. ೧: ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ನಡೆಯಿತು.
ಗ್ರಾಮದ ನಿವಾಸಿ ಶೇಖರ್ ಅವರ ಮನೆಯಿಂದ ಶ್ರೀ ಮುತ್ತಪ್ಪ ಕಲಶವನ್ನು ವಾದ್ಯಮೇಳದೊಂದಿಗೆ ಶ್ರೀ ಮುತ್ತಪ್ಪ ದೇವಾಲಯಕ್ಕೆ ಕರೆತರಲಾಯಿತು. ರಾತ್ರಿ ಮುತ್ತಪ್ಪನ ವೆಳ್ಳಾಟಂ, ಶಾಸ್ತಪ್ಪನ, ಗುಳಿಗನ ತೆರೆ, ತಿರುವಪ್ಪನ, ಭಗವತಿ ತೆರೆಗಳು ನಡೆದವು.
ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಿಗೆ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ತೆರೆ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.