ನಾಪೋಕ್ಲು, ಮಾ. ೧: ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸಲು ಮಕ್ಕಳ ಸಂತ ಸಹಕಾರಿ ಎಂದು ಪೆರಾಜೆ ಕುಂದಲ್ಪಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಯತೀಶ್ ಸಿ.ಎಸ್ ಹೇಳಿದರು.

ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಲಿಕಾ ಅವಧಿಯಲ್ಲಿ ಪಠ್ಯ ವಿಷಯಗಳ ಜೊತೆ ಸಹಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಕ್ರೀಡೆ, ಶಿಸ್ತು, ವ್ಯವಹಾರಕೌಶಲ್ಯ, ಭಾಷೆ ಬೆಳವಣಿಗೆ ಇತ್ಯಾದಿಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತಾವು ತಂದ ಸರಕುಗಳನ್ನು ಮಾರಾಟ ಮಾಡಿದರು. ಶಾಲೆಯಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಕುಮಾರ್ ಎನ್.ಎಸ್, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.