ಕುಶಾಲನಗರ, ಮಾ. ೧೭: ಗೋವುಗಳು ಮಾನವನಿಗೆ ಹುಟ್ಟಿನಿಂದ ಸಾವಿನ ತನಕ ಅಮೃತ ಸಮಾನವಾದ ಹಾಲು ಮತ್ತಿತರ ಔಷಧಿ ಮೂಲಗಳನ್ನು ಕರುಣಿಸುವ ಮೂಲಕ ವಿಜ್ಞಾನ ಯುಗದಲ್ಲಿ ನಡೆದಾಡುವ ಆಸ್ಪತ್ರೆಯಂತೆ ಕೆಲಸ ನಿರ್ವಹಿಸುತ್ತವೆ ಎಂದು ಸ್ವಾಮಿ ಸೋಮನಾಥನಂದಪುರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪುಣ್ಯಕೋಟಿ ಗೋಶಾಲೆಗೆ ಮಡಿಕೇರಿಯ ಉದ್ಯಮಿಗಳಾದ ಜಯಶ್ರೀ ಅಜಿತ್ ಕುಮಾರ್ ದಂಪತಿ ಅಗತ್ಯವಾದ ಆಹಾರ ಸಾಮಗ್ರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಗೋವುಗಳ ಪಾಲನೆ, ಸಂರಕ್ಷಣೆ ಸಂಬAಧ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಗೋಶಾಲೆ ಮಾಲೀಕರಾದ ಶ್ರೀನಿವಾಸ್, ಕಳೆದ ಕೆಲವು ವರ್ಷಗಳಿಂದ ಮಾದಾಪಟ್ಟಣದ ಗ್ರಾಮದಲ್ಲಿರುವ ತನ್ನ ನಾಲ್ಕು ಎಕರೆ ಪ್ರದೇಶದಲ್ಲಿ ಗೋಶಾಲೆ ಆರಂಭಿಸಿದ್ದು ,ಇದೀಗ ಸುಮಾರು ೬೦ಕ್ಕೂ ಅಧಿಕ ಗೋವುಗಳು ನೆಲೆಸಿವೆ ಎಂದು ವಿವರಿಸಿದರು.

ಈ ಸಂದರ್ಭ ಪ್ರಮುಖರಾದ ಮಧುಸೂದನ್, ಜನಾರ್ಧನ್, ರಾಜೀವ್, ಅನೀಶ್, ಕೃಷ್ಣಮೂರ್ತಿ, ಮನು ರೈ ಅರುಣ, ಪುಣ್ಯಕೋಟಿ ಗೋ ಶಾಲೆಯ ಟ್ರಸ್ಟ್ ಅಧ್ಯಕ್ಷರಾದ ನಸ್ಮಿತಾ ಶ್ರೀನಿವಾಸ್ ಮತ್ತಿತರರು ಇದ್ದರು.