ಮಡಿಕೇರಿ, ಮಾ. ೩೧: ಭಾರತದ ರಿಜಿಸ್ಟಾçರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯ ಇವರ ಪರವಾಗಿ, ಜನಗಣತಿ ಕಾಯ್ದೆ-೧೯೪೮ ರ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿ ಇದೆ. ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿದೆ. ಅದರಂತೆ, ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ, ಹೆಸರು ಮತ್ತು ಗುರುತುಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ಸದರಿ ದತ್ತಾಂಶವನ್ನು ಬಳಿಸಿಕೊಳ್ಳುವುದಿಲ್ಲ. ಇದನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಈ ನಿಟ್ಟಿನಲ್ಲಿ ಏಪ್ರಿಲ್ ೧ ರಿಂದ ೧೫ ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ ೧೫-೨೦ ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು (Sಇಐಈ ಇಓUಒಇಖಂಖಿIಔಓ Iಆ) ಪಡೆಯಬಹುದಾಗಿದೆ.

ಹಾಗೆಯೇ ಪರಿಶೀಲನೆಗೆ ಬರುವ ಗಣತಿದಾರರಿಗೆ ಈ ಐಡಿ ಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ತಮ್ಮ ಸ್ವಯಂ ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ.

ಈ ಮೇರೆಗೆ, ವಿಕಸಿತ ಭಾರತ @೨೦೪೭ ಅಡಿಪಾಯಕ್ಕೆ ಸಹಕರಿಸಲು ಕೊಡಗು ಜಿಲ್ಲೆಯ ಎಲ್ಲಾ ಸಾರ್ವಜನಿಕ/ ನಾಗರಿಕರು ತಾವೇ ಅಂತರ್ಜಾಲದ ಕೊಂಡಿ(ಐiಟಿಞ): hಣಣಠಿs://se.ಛಿeಟಿsus.gov.iಟಿ/ ಅಂತರ್ಜಾಲದ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಲು ಕೋರಿದೆ. ಸಮಸ್ಯೆಗಳು ಇದ್ದಲ್ಲಿ ಅಂತರ್ಜಾಲದಲ್ಲಿ ಲಭ್ಯವಿರುವ se Useಡಿ ಉuiಜe, se ಈಟoತಿ ಅhಚಿಡಿಣ & se ಅಂಕಿಗಳನ್ನು ಅನುಸರಿಸಬಹುದಾಗಿರುತ್ತದೆ ಎಂದು ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ತಿಳಿಸಿದ್ದಾರೆ.

ಸರಳ ವಿಧಾನಗಳು: ಅಂತರ್ಜಾಲದ ಲಿಂಕ್ ನಲ್ಲಿ ಲಾಗಿನ್ ಆಗುವುದು (ಂಛಿಛಿess ಂಟಿಜ Iಟಿಣiಚಿಟ ಐogiಟಿ), ಮನೆಯ ನೋಂದಣಿ ಮಾಡುವುದು (ಊousehoಟಜ ಖegisಣಡಿಚಿಣioಟಿ), ಭಾಷೆಯ ಆಯ್ಕೆ ಮತ್ತು ಓ.ಟಿ.ಪಿ ಪ್ರಮಾಣೀಕರಣ (ಐಚಿಟಿguಚಿge seಟeಛಿಣioಟಿ ಚಿಟಿಜ ಔಖಿP ಗಿಡಿiಜಿiಛಿಚಿಣioಟಿ), ನಿಮ್ಮ ನಿವಾಸ ಸ್ಥಳದ ವಿವರಗಳನ್ನು ಒದಗಿಸುವುದು (Pಡಿoviಜiಟಿg ಐoಛಿಚಿಣioಟಿ ಆeಣಚಿiಟs oಜಿ ಥಿouಡಿ ಖesiಜeಟಿಛಿe), ನಕ್ಷೆಯಲ್ಲಿ ನಿಮ್ಮ ನಿವಾಸವನ್ನು ಗುರುತಿಸುವುದು (ಐoಛಿಚಿಣiಟಿg ಥಿouಡಿ ಖesiಜeಟಿಛಿe oಟಿ ಒಚಿಠಿ), ಪ್ರಶ್ನಾವಳಿಗಳ ಪೂರ್ಣಗೊಳಿಸುವುದು (ಅomಠಿಟeಣiಟಿg ಣhe ಕಿuesಣioಟಿಟಿಚಿiಡಿe), ನಮೂದಿಸಿದ ದತ್ತಾಂಶದ ಪರಿಶೀಲನೆ (ಖevieತಿ oಜಿ eಟಿಣeಡಿeಜ ಜಚಿಣಚಿ), (ಈiಟಿಚಿಟ Subimissioಟಿ) ಹಾಗೂ ಕ್ಷೇತ್ರ ಮೇಲ್ವಿಚಾರಣೆ (ಈieಟಜ ಗಿಚಿಟiಜಚಿಣioಟಿ) ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸ್ವಯಂ ಗಣತಿಯನ್ನು ಮಾಡುವ ವಿಧಾನ

ಅಧಿಕೃತ ಪೋರ್ಟಲ್ se.ಛಿeಟಿsus.gov.iಟಿ ಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಔಖಿP ಮೂಲಕ ಲಾಗಿನ್ ಆಗಿ, ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್‌ನಲ್ಲಿ ಮನೆಯ ಸ್ಥಳವನ್ನು ಗುರುತಿಸಿ, ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬAಧಿಸಿದ ವಿವರಗಳನ್ನು ಭರ್ತಿ ಮಾಡಿ, ಸಲ್ಲಿಸಿದ ನಂತರ Sಇ Iಆ ಅನ್ನು ಪಡೆಯಬಹುದು. ಆ Sಇ Iಆ ಅನ್ನು ಸುರಕ್ಷಿತವಾಗಿರಿಸಿಕೊಂಡು ಗಣತಿದಾರರು ಭೇಟಿ ನೀಡಿದಾಗ ನಿಮ್ಮ Sಇ Iಆ ಅನ್ನು ಒದಗಿಸಿ, ಗಣತಿದಾರರು Sಇ Iಆ ಮೂಲಕ ವಿವರಗಳನ್ನು ದೃಢೀಕರಿಸುತ್ತಾರೆ.