ಚೆಯ್ಯಂಡಾಣೆ, ಏ. ೧: ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಹೆಚ್.ಪಿ.ವಿ. ಲಸಿಕಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅಂಚು ಗೌತಮಿ ಕೆ.ಎ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಲಸಿಕೆಯ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಬೆಳಿಗ್ಗೆ ೧೦ ಗಂಟೆಯಿAದ ಆರಂಭಗೊAಡ ಶಿಬಿರ ೧ ಗಂಟೆಯವರಗೆ ನಡೆಯಿತು. ಶಿಬಿರದಲ್ಲಿ ೧೪ ವರ್ಷದ ಬಾಲಕಿಯರು ಲಸಿಕೆಯನ್ನು ಪಡೆದುಕೊಂಡರು. ಎಲ್.ಎಚ್.ವಿ ವೇದಾವತಿ, ಕಿರಿಯ ಆರೋಗ್ಯ ಸುರಕ್ಷಾಧಿಕಾರಿ ಕನಕಾವತಿ, ಉಮಾ ಮಹೇಶ್ವರಿ, ಜಾನಕಿ, ಶುಶ್ರೂಷಕಿ ಪೂಜಾ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.