ಕಣಿವೆ, ಏ. ೧: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದ ಕಾವೇರಿ ನದಿ ದಂಡೆಯ ಐತಿಹಾಸಿಕ ನಂಜುAಡೇಶ್ವರ ಹಾಗೂ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಸೋಮವಾರ ಸಂಜೆಯಿAದ ಆರಂಭ ಗೊಂಡು ಮಂಗಳವಾರ ಮಧ್ಯಾಹ್ನದವರೆಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸೋಮವಾರ ಸಂಜೆ ಗ್ರಾಮದ ಪಟೇಲ್ ಮೋಹನ ಕುಮಾರ್ ಮನೆಯಿಂದ ಕನ್ನಂಬಾಡಮ್ಮ ದೇವರ ಆಭರಣಗಳನ್ನು ಧಾರ್ಮಿಕ ವಿಧಿಗಳೊಂದಿಗೆ ಮಂಗಳವಾದ್ಯ ಹಾಗೂ ಪೂರ್ಣಕುಂಭದೊAದಿಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಬಳಿಕ ಮಂಗಳವಾರ ಬೆಳಿಗ್ಗೆ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವತಾ ಮೂರ್ತಿಗಳನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು. ಬಳಿಕ ವೀರಗಾಸೆ ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ದೇವರನ್ನು ತರಲಾಯಿತು. ಬಳಿಕ ದೇವಾಲಯದ ಮುಂಬದಿ ಅಳವಡಿತ ಕೊಂಡೋತ್ಸವ ಪೂಜೆ ಬಳಿಕ ದೇವತಾ ಮೂರ್ತಿ ಹೊತ್ತೊಯ್ದ ಭಕ್ತರು ವೀರಗಾಸೆಯವರೊಂದಿಗೆ ಬರಿಗಾಲಲ್ಲಿ ಕೊಂಡವನ್ನು ತುಳಿದು ಭಕ್ತಿ ಸಮರ್ಪಿಸಿದರು.

ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ, ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ಖಜಾಂಚಿ ಮುರುಳಿ ಮಾದಯ್ಯ ಪದಾಧಿಕಾರಿಗಳಾದ ಕೆ.ಎಸ್. ರತೀಶ್, ಬಾಲಕೃಷ್ಣ, ವಿಜು ಚೆಂಗಪ್ಪ, ಲೀಲಾವತಿ, ಬಿ.ಸಿ. ಕಾಳಯ್ಯ, ಕೆಮ್ಮಾರನ ಲೋಕನಾಥ್, ಮೊದಲಾದವರಿದ್ದರು. ಸೋಮವಾರಪೇಟೆಯ ಕೆ.ಪಿ. ಯೋಗೇಶ್, ಎಸ್.ಎ. ಹರೀಶ್ ಪೂಜಾ ವಿಧಿ ನಡೆಸಿಕೊಟ್ಟರು. ಪಾಂಡವಪುರದ ವಿಶ್ವರುದ್ರ, ರವಿಕುಮಾರ್, ಪ್ರಜ್ವಲ್ ತಂಡದಿAದ ವೀರಗಾಸೆ ಭಕ್ತರನ್ನು ಆಕರ್ಷಿಸಿತು. ಕಾವೇರಿ ನದಿಯಿಂದ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ತರುವಾಗ ಸ್ಥಳೀಯ ಆದಿವಾಸಿ ಮಹಿಳೆಯರು ಮಕ್ಕಳು ಹಾಗೂ ಮಂಗಳ ಮುಖಿಯರು ಕುಣಿದು ಕುಪ್ಪಳಿಸಿ ಪುಳಕಿತರಾದರು.