ಮಡಿಕೇರಿ, ಮೇ ೪: ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಮನ್ಮಧ್ವಾಚಾರ್ಯ ಮೂಲಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನ, ದಿವ್ಯ ಉಪಸ್ಥಿತಿಯಲ್ಲಿ ತಾ. ೧೪ ರಿಂದ ೧೭ರವರೆಗೆ ೮ ರಿಂದ ೧೨ ವರ್ಷದ ಮಕ್ಕಳಿಗೆ ಉಚಿತವಾಗಿ ಸರಕಾರದ ನಿಲುವಿಗೆ ಪೂರಕವಾಗಿ ಮೊಬೈಲ್ ಮುಕ್ತ ನೈಜ ಜೀವನ ಕಲಿಸುವ ಮೊಬೈಲ್ ವರ್ಜನ ಶಿಬಿರ ಶ್ರೀ ಪುತ್ತಿಗೆ ಮೂಲ ಮಠದದಲ್ಲಿ ನಡೆಯಲಿದೆ. ನೋಂದಣಿ, ಹೆಚ್ಚಿನ ಮಾಹಿತಿಗಾಗಿ ೮೭೯೨೧೫೮೯೪೬, ೯೮೮೦೬೦೫೬೯೧ನ್ನು ಸಂಪರ್ಕಿಸಬಹುದು.