ಮಡಿಕೇರಿ, ಮೇ ೮: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾಟದಲ್ಲಿ ಕೂಡಕಂಡಿ ಹಾಗೂ ಚೆಟ್ಟಿಮಾಡ ಪ್ರಿ ಕ್ವಾರ್ಟರ್‌ಗೆ ಪ್ರವೇಶಿಸಿದೆ. ಹುಲಿಮನೆ, ಬೊಳ್ಳುಮಾನಿ ಮುಂದಿನ ಹಂತಕ್ಕೆ ಸೆಣೆಸಾಡಲು ಅರ್ಹತೆ ಗಳಿಸಿಕೊಂಡಿದೆ.
ಕುಕ್ಕುನೂರು ತಂಡದ ವಿರುದ್ಧ ಸಣ್ಣಜನ ೯ ರನ್‌ಗಳ ಜಯ ದಾಖಲಿಸಿತು. ಸಣ್ಣಜನ ೩ ವಿಕೆಟ್ ನಷ್ಟಕ್ಕೆ ೬೯ ರನ್ ಬಾರಿಸಿತು. ಕುಕ್ಕುನೂರು ೧ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿ ಸೋಲನುಭವಿಸಿತು. ಅಮೆಮನೆ (ಸಿ) ಹಾಗೂ ಕೋಳಿಮಾಡು (ಚೇಲಾವರ) ನಡುವಿನ ಪಂದ್ಯದಲ್ಲಿ ಅಮೆಮನೆ ೩೦ ರನ್‌ಗಳ ಜಯ ಪಡೆಯಿತು. ಅಮೆಮನೆ (ಸಿ) ೩ ವಿಕೆಟ್ ನಷ್ಟಕ್ಕೆ ೭೪ ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಕೋಳಿಮಾಡು ೩ ವಿಕೆಟ್ ನಷ್ಟಕ್ಕೆ ೪೪ ರನ್ ದಾಖಲಿಸಿ ಪರಾಭವಗೊಂಡಿತು. ಅಯ್ಯೇಟಿ ವಿರುದ್ಧ ಬಿಳಿಯಂಡ್ರ ಪರಾಜಿತಗೊಂಡಿತು. ಅಯ್ಯೇಟಿ ೪ ವಿಕೆಟ್ ನಷ್ಟಕ್ಕೆ ೪೯ ರನ್ ಬಾರಿಸಿತು. ಬಿಳಿಯಂಡ್ರ ೫ ವಿಕೆಟ್ ನಷ್ಟಕ್ಕೆ ೩೭ ರನ್ ದಾಖಲಿಸಿ ಸೋಲನುಭವಿಸಿತು. ಕಟ್ರತನ ವಿರುದ್ಧ ಕತ್ರಿಮನೆ ಗೆಲುವಿನ ನಗೆ ಬೀರಿತು. ಕಟ್ರತನ ೪ ವಿಕೆಟ್ ನಷ್ಟಲ್ಲೆ ೬೦ ರನ್ ಪೇರಿಸಿತು. ಕತ್ರಿಮನೆ ೪ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೨ ರನ್ ಬಾರಿಸಿ ಗೆಲುವು ಪಡೆಯಿತು. ಉಪ್ಪುಂಡಿ ತಂಡವನ್ನು ಕೊಟ್ಟಕೇರಿಯನ ಮಣಿಸಿತು. ಉಪ್ಪುಂಡಿ ೧ ವಿಕೆಟ್ ನಷ್ಟಕ್ಕೆ ೭೭ ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಕೊಟ್ಟಕೇರಿಯನ ೪.೧ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ೭೮ ರನ್ ಬಾರಿಸಿ ಜಯ ತನ್ನದಾಗಿಸಿಕೊಂಡಿತು.
ಕುದುಕುಳಿ (ಬಿ) ವಿರುದ್ಧ ಕೊಂಬಾAಡ ಜಯಗಳಿಸಿತು. ಕೊಂಬಾAಡ ೫ ವಿಕೆಟ್ ನಷ್ಟಕ್ಕೆ ೭೧ ರನ್ ಬಾರಿಸಿತು. ಕುದುಕುಳಿ (ಬಿ) ೩ ವಿಕೆಟ್ ಕಳೆದುಕೊಂಡು ೫೭ ರನ್ ದಾಖಲಿಸಿ ಸೋಲನುಭವಿಸಿತು. ಅಮೆಮನೆ (ಬಿ) ವಿರುದ್ಧ ಬೊಳ್ಳುಮಾನಿ ವಿಜಯಿಯಾಯಿತು. ಬೊಳ್ಳುಮಾನಿ ೨ ವಿಕೆಟ್ ನಷ್ಟಕ್ಕೆ ೫೭ ರನ್ ಕಲೆ ಹಾಕಿತು. ಅಮೆಮನೆ ೫ ವಿಕೆಟ್ ನಷ್ಟಕ್ಕೆ ೩೬ ರನ್ ದಾಖಲಿಸಿ ಸೋಲಿಗೆ ಶರಣಾಯಿತು. ಕೂಡಕಂಡಿ ತಂಡ ಕೊಟ್ಟಕೇರಿಯ ತಂಡವನ್ನು ಸೋಲಿಸಿತು. ಕೊಟ್ಟಕೇರಿಯನ ೬ ವಿಕೆಟ್ ನಷ್ಟಕ್ಕೆ ೫೭ ರನ್ ಬಾರಿಸಿತು. ಗುರಿ ಬೆನ್ನತ್ತಿದ ಕೂಡಕಂಡಿ ೩.೩ ಓವರ್‌ಗಳಲ್ಲಿ ೫೮ ರನ್ ಸಂಪಾದಿಸಿ ಗೆಲುವು ಸಾಧಿಸಿತು. ಹುಲಿಮನೆ ವಿರುದ್ಧ ಅಮೆಮನೆ (ಸಿ) ಸೋಲಿಗೊಳಗಾಯಿತು. ಅಮೆಮನೆ (ಸಿ) ೩ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿತು. ಹುಲಿಮನೆ ೪.೩ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೨ ರನ್ ಪೇರಿಸಿ ಗೆಲುವು ಪಡೆಯಿತು.
ಕತ್ರಿಮನೆ ವಿರುದ್ಧ ಕೇಚಪ್ಪನ ಜಯಗಳಿಸಿತು. ಕತ್ರಿಮನೆ ೧ ವಿಕೆಟ್ ನಷ್ಟಕ್ಕೆ ೭೭ ರನ್ ದಾಖಲಿಸಿತು. ಕೇಚಪ್ಪನ ತಂಡ ೧ ವಿಕೆಟ್ ನಷ್ಟಕ್ಕೆ ೮೧ ರನ್ ಸಂಪಾದಿಸಿ ಗೆಲುವು ಪಡೆಯಿತು. ಕೊಂಬಾಡ ವಿರುದ್ಧ ಊರುಬೈಲು ಜಯ ಗಳಿಸಿತು. ಕೊಂಬಾAಡ ೪ ವಿಕೆಟ್ ನಷ್ಟಕ್ಕೆ ೫೧ ರನ್ ಸಂಪಾದಿಸಿತು. ಊರುಬೈಲು ೪.೩ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿ ಗೆಲುವು ಪಡೆಯಿತು. ಕೂಡಕಂಡಿ ಸಣ್ಣಜನ ತಂಡವನ್ನು ಮಣಿಸಿತು. ಕೂಡಕಂಡಿ ೪ ವಿಕೆಟ್ ನಷ್ಟಕ್ಕೆ ೭೧ ರನ್ ಗಳಿಸಿತು. ಸಣ್ಣಜನ ೪ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಗೆ ಶರಣಾಯಿತು.
ಅಯ್ಯೇಟಿ ವಿರುದ್ಧ ಬೊಳ್ಳುಮಾನಿ ಜಯ ಗಳಿಸಿತು. ಅಯ್ಯೇಟಿ ೮ ವಿಕೆಟ್ ನಷ್ಟಕ್ಕೆ ೨೯ ರನ್ ಗಳಿಸಿತು. ಬೊಳ್ಳುಮಾನಿ ೨ ಓವರ್‌ಗಳಲ್ಲಿಯೇ ೧ ವಿಕೆಟ್ ಕಳೆದುಕೊಂಡು ೩೦ ರನ್ ಪೇರಿಸಿ ವಿಜಯಿಯಾಯಿತು. ಕೇಚಪ್ಪನ ತಂಡವನ್ನು ಹುಲಿಮನೆ ಸೋಲಿಸಿತು. ಕೇಚಪ್ಪನ ೪ ವಿಕೆಟ್ ನಷ್ಟಕ್ಕೆ ೪೦ ರನ್ ದಾಖಲಿಸಿತು. ಹುಲಿಮನೆ ೩ ವಿಕೆಟ್ ನಷ್ಟಕ್ಕೆ ೪೧ ರನ್ ಬಾರಿಸಿ ಜಯಗಳಿಸಿತು. ಊರುಬೈಲು ವಿರುದ್ಧ ಚೆಟ್ಟಿಮಾಡ ಜಯಗಳಿಸಿತು. ಊರುಬೈಲು ೬ ವಿಕೆಟ್ ನಷ್ಟಕ್ಕೆ ೫೩ ರನ್ ಕಲೆಹಾಕಿದರೆ, ಚೆಟ್ಟಿಮಾಡ ೫ ವಿಕೆಟ್ ನಷ್ಟಕ್ಕೆ ೫೫ ರನ್ ಬಾರಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಬಾರಿಕೆ ವಿರುದ್ಧ ಕೂಡಕಂಡಿ ೬೨ ರನ್‌ಗಳ ಜಯ ಪಡೆಯಿತು. ಕೂಡಕಂಡಿ ೨ ವಿಕೆಟ್ ನಷ್ಟಕ್ಕೆ ೯೫ ರನ್ ಬಾರಿಸಿತು. ಬಾರಿಕೆ ೬ ವಿಕೆಟ್ ನಷ್ಟಕ್ಕೆ ೩೩ ರನ್‌ಗಳನ್ನಷ್ಟೆ ದಾಖಲಿಸಿ ಸೋಲನುಭವಿಸಿತು. ಚೆಟ್ಟಿಮಾಡ ಹಾಗೂ ಊರುಬೈಲು ನಡುವಿನ ಪಂದ್ಯದಲ್ಲಿ ಡ್ರಾ ಫಲಿತಾಂಶ ಹೊರಬಿತ್ತು. ಉಭಯ ತಂಡಗಳು ೫೫ ರನ್ ಕಲೆ ಹಾಕಿದವು. ಸೂಪರ್ ಓವರ್‌ನಲ್ಲಿ ಚೆಟ್ಟಿಮಾಡ ಜಯಗಳಿಸಿತು. ಊರುಬೈಲು ೧ ವಿಕೆಟ್ ನಷ್ಟಕ್ಕೆ ೧೦ ರನ್ ಗಳಿಸಿತು. ಚೆಟ್ಟಿಮಾಡ ೦.೪ ಓವರ್‌ನಲ್ಲಿ ೧೧ ರನ್ ದಾಖಲಿಸಿ ಗೆಲುವು ತನ್ನದಾಗಿಸಿಕೊಂಡಿತು.