ಸೋಮವಾರಪೇಟೆ, ಮೇ ೧೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಕಾರ್ಯಕ್ಷೇತ್ರದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ರೂ. ೧.೫೦ ಲಕ್ಷ ಮೊತ್ತದ ಡಿಡಿಯನ್ನು ಶುಕ್ರವಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ವಿಟ್ಟಲ್ ಸಾಲಿಯನ್ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಶುಭ ಹಾರೈಸಿದರು. ಇದೇ ವೇಳೆ ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿಗಳಾದ ಹನುಮಂತಪ್ಪ ಅಂಗಡಿ, ಜನ ಜಾಗೃತಿ ಸಮಿತಿ ಸದಸ್ಯ ಸೋಮೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಯಶೋಧ, ಗಣ್ಯರಾದ ಧರ್ಮಪ್ಪ, ಚೇತನ್, ಮುತ್ತಮ್ಮ ಇದ್ದರು.