ಮಡಿಕೇರಿ, ಮೇ ೧೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕುಟುಂಬ - ೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಟ್ಟಡ ಪ್ರೀ ಕ್ವಾರ್ಟರ್ ಹಂತ ಪ್ರವೇಶಿಸಿದೆ.
ಇಂದು ನಡೆದ ಪಂದ್ಯದಲ್ಲಿ ನಾರ್ಕೋಡು ತಂಡ ಪುದಿಯನೆರವನ ವಿರುದ್ಧ ಜಯಗಳಿಸಿತು. ೫ ಓವರ್‌ಗೆ ನಾರ್ಕೋಡು ೩ ವಿಕೆಟ್ ನಷ್ಟಕ್ಕೆ ೬೭ ರನ್‌ಗಳಿಸಿದರೆ, ಪುದಿಯನೆರವನ ೫ ವಿಕೆಟ್‌ಗೆ ೫೭ ರನ್‌ಗಳಿಸಿತು. ಪರಿಚನ ತಂಡ ದೋಲ್ಪಾಡಿ ವಿರುದ್ಧ ಜಯಗಳಿಸಿತು. ಪಂಚನ ೩ ವಿಕೆಟ್‌ಗೆ ೬೫ ರನ್‌ಗಳಿಸಿದರೆ, ದೋಲ್ಪಾಡಿ ೨ ವಿಕೆಟ್‌ಗೆ ೪೬ ರನ್‌ಗಳಿಸಿತು. ತಳೂರು ತಂಡ ಕುಯ್ಯಮುಡಿ ವಿರುದ್ಧ ಜಯಗಳಿಸಿತು. ತಳೂರು ೪ ವಿಕೆಟ್‌ಗೆ ೬೯ ರನ್ ಗಳಿಸಿದರೆ, ಕುಯ್ಯಮುಡಿ ೩ ವಿಕೆಟ್‌ಗೆ ೫೮ ರನ್‌ಗಳಿಸಿತು.
ಕುಲ್ಲಚೆಟ್ಟಿರ ತಂಡ ತೋರೆರ ವಿರುದ್ಧ ಜಯ ಸಾಧಿಸಿತು. ತೋರೆರ ೩ ವಿಕೆಟ್‌ಗೆ ೪೫ ರನ್‌ಗಳಿಸಿದರೆ, ಕುಲ್ಲಚೆಟ್ಟಿರ ೨ ವಿಕೆಟ್‌ಗೆ ೪೬ ರನ್‌ಗಳಿಸಿತು. ನಾರ್ಕೋಡು ತಂಡ ನಿಡ್ಯಮಲೆ ಬಿ ವಿರುದ್ಧ ಜಯ ಸಾಧಿಸಿತು. ನಾರ್ಕೊಡು ೨ ವಿಕೆಟ್‌ಗೆ ೧೧೪ ರನ್ ಬಾರಿಸಿದರೆ, ನಿಡ್ಯಮಲೆ ೫ ವಿಕೆಟ್‌ಗೆ ೬೦ ರನ್‌ಗಳಿಸಿತು. ನಾರ್ಕೋಡು ಸಚಿನ್ ೬೫ ರನ್ ಬಾರಿಸಿದರು. ಪಟ್ಟಡ ತಂಡ ಪರಿಚನ ವಿರುದ್ಧ ಜಯಗಳಿಸಿತು. ಪರಿಚನ ೪ ವಿಕೆಟ್‌ಗೆ ೪೨ ರನ್‌ಗಳಿಸಿದರೆ, ಪಟ್ಟಡ ೧ ವಿಕೆಟ್‌ಗೆ ೪೩ ರನ್‌ಗಳಿಸಿತು. ಕೈಕೇರಿ ಮುಕ್ಕಾಟಿ ತಂಡ ಕೋಯಬೈಲು ವಿರುದ್ಧ ಜಯಗಳಿಸಿತು. ಕೈಕೇರಿ ಮುಕ್ಕಾಟಿ ೪ ವಿಕೆಟ್‌ಗೆ ೮೮ ರನ್‌ಗಳಿಸಿದರೆ, ಕೋಯಬೈಲು ೨ ವಿಕೆಟ್‌ಗೆ ೩೪ ರನ್‌ಗಳಿಸಿತು.
ಮೇಚನ ತಂಡ ಕಾವೇರಿ ಮನೆ ವಿರುದ್ಧ ಗೆಲುವು ಸಾಧಿಸಿತು. ಕಾವೇರಿಮನೆ ೧ ವಿಕೆಟ್‌ಗೆ ೬೩ ರನ್‌ಗಳಿಸಿದರೆ, ಮೇಚನ ಯಾವುದೇ ವಿಕೆಟ್ ನಷ್ಟವಿಲ್ಲದೆ ೬೬ ರನ್‌ಗಳಿಸಿತು. ಪಟ್ಟಡ ತಂಡ ಕೈಬುಲಿ ವಿರುದ್ಧ ಜಯಗಳಿಸಿತು. ಪಟ್ಟಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೫ ರನ್‌ಗಳಿಸಿದರೆ, ಕೈಬಿಲಿ ೬ ವಿಕೆಟ್‌ಗೆ ೪೫ ರನ್‌ಗಳಿಸಿತು.
ಉಳುವಾರು ತಂಡ ತಳೂರು ವಿರುದ್ಧ ಜಯಗಳಿಸಿತು. ಉಳುವಾರು ೧ ವಿಕೆಟ್‌ಗೆ ೭೮ ರನ್‌ಗಳಿಸಿದರೆ, ತಳೂರು ೫ ವಿಕಟ್‌ಗೆ ೪೮ ರನ್ ಬಾರಿಸಿತು. ಕೀಜನ ತಂಡ ಕೈಕೇರಿ ಮುಕ್ಕಾಟಿ ವಿರುದ್ಧ ಜಯಿಸಿತು. ಕೈಕೇರಿ ಮುಕ್ಕಾಟಿ ೪ ವಿಕೆಟ್‌ಗೆ ೪೮ ರನ್‌ಗಳಿಸಿದರೆ ಕೀಜನ ೫ ವಿಕೆಟ್‌ಗೆ ೪೯ ರನ್‌ಬಾರಿಸಿತು.
ಕುಲ್ಲಚೆಟ್ಟಿರ ತಂಡ ಮೇಚನ ವಿರುದ್ಧ ಜಯಿಸಿತು. ಕುಲ್ಲಚೆಟ್ಟಿರ ೧ ವಿಕೆಟ್‌ಗೆ ೭೯ ರನ್‌ಗಳಿಸಿದರೆ, ಮೇಚನ ೩ ವಿಕೆಟ್ ೪೮ ರನ್‌ಗಳಿಸಿತು. ಕುಲ್ಲಚೆಟ್ಟಿರ ಗಗನ್ ೫೧ ರನ್‌ಗಳಿಸಿದರು. ಪಟ್ಟಡ ತಂಡ ಕುದುಪಜೆ ಎ ವಿರುದ್ಧ ಜಯಿಸಿತು. ಕುದುಪಜೆ ೨ ವಿಕೆಟ್‌ಗೆ ೬೪ ರನ್‌ಗಳಿಸಿದರೆ, ಪಟ್ಟಡ ೧ ವಿಕೆಟ್‌ಗೆ ೬೫ ರನ್‌ಗಳಿಸಿತು. ನಾರ್ಕೋಡು ತಂಡದ ವಿರುದ್ಧ ಉಳುವಾರು ಜಯಗಳಿಸಿತು. ನಾರ್ಕೋಡು ೪ ವಿಕೆಟ್‌ಗೆ ೩೭ ರನ್‌ಗಳಿಸಿದರೆ, ಉಳುವಾರು ಯಾವುದೇ ವಿಕೆಟ್ ನಷ್ಟವಿಲ್ಲದೆ ೩೯ ರನ್‌ಗಳಿಸಿತು.