ಮಡಿಕೇರಿ, ಮೇ ೧೩: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆಯುತ್ತಿರುವ ೪೮ ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವು ತಾ. ೧೩ ರಂದು ಮಡಿಕೇರಿಯ ಕೊಡವ ಮಂದ್‌ನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿತು. ಸಿಎನ್‌ಸಿ ಮುಖ್ಯಸ್ಥ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಡಾ. ಮಾತಂಡ ಅಯ್ಯಪ್ಪ ಹಾಗೂ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ಅವರು ಇಂದು ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡವರ ರಾಜಕೀಯ ಹಕ್ಕುಗಳು ಮತ್ತು ಜನಗಣತಿ ಗುರುತಿಸುವಿಕೆಗಾಗಿ ಸಿಎನ್‌ಸಿ ನಡೆಸುತ್ತಿರುವ ಸಾಂವಿಧಾನಿಕ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.ಎನ್.ಯು. ನಾಚಪ್ಪ, ಬಾಚರಣಿಯಂಡ ಚಿಪ್ಪಣ್ಣ, ನಂದೇಟಿರ ರವಿ ಸುಬ್ಬಯ್ಯ, ಅಜ್ಜಿಕುಟ್ಟಿರ ಲೋಕೇಶ್, ಮಂದಪAಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್ ತಿಮ್ಮಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಸಾದೇರ ರಮೇಶ್, ಪುಲ್ಲೇರ ಕಾಳಪ್ಪ, ಪಟ್ಟಮಾಡ ಕುಶ, ಚೋಳಪಂಡ ನಾಣಯ್ಯ, ಬೊಳ್ಳಾರಪಂಡ ಮಾಚಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ ಮತ್ತು ಕುಕ್ಕೆರ ಜಯ ಚಿಣ್ಣಪ್ಪ, ಕುಲ್ಲೇಟಿರ ಬೇಬ ಅರುಣ, ಅಪ್ಪನೆರವಂಡ ವಿನು, ಬಾಳೆಯಡ ಜಗದೀಶ್, ಮಣವಟ್ಟಿರ ಚಿಣ್ಣಪ್ಪ ಅವರು ಪಾಲ್ಗೊಂಡಿದ್ದರು.