ಮಡಿಕೇರಿ, ಮೇ ೨೨: ಗಾಲ್ಫ್ ಕ್ರೀಡೆ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿಷ್ಠಿತವಾಗಿ ಗುರುತಿಸಲ್ಪಟ್ಟಿದೆ. ಈ ಕ್ರೀಡೆಯಲ್ಲಿ ಕೊಡಗಿನ ಯುವತಿಯೊಬ್ಬಳು ಸಣ್ಣ ಪ್ರಾಯದಲ್ಲೇ ಅದ್ಭುತ ಸಾಧನೆಯೊಂದಿಗೆ ಇತಿಹಾಸ ಸೃಷ್ಟಿಸುವ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದಾಳೆ.

ಜಿಲ್ಲೆಯ ಯುವತಿ ಬಲ್ಲಚಂಡ ಐದಾ ತಿಮ್ಮಯ್ಯ ಈ ಸಾಧನೆಯೊಂದಿಗೆ ದೇಶದಲ್ಲಿ ಅತ್ಯುತ್ತಮ ಗಾಲ್ಫ್ ಪಟುವಾಗಿ ಕೀರ್ತಿಗಳಿಸಿದ್ದಾಳೆ.

ಮೇ ೧೮ ರಿಂದ ೨೧ರವರೆಗೆ ಮುಂಬೈನ ವಿಲ್ಲಿಂಗ್ಟನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂಡಿಯನ್ ಗಾಲ್ಫ್ ಯೂನಿಯನ್ ವತಿಯಿಂದ ಜರುಗಿದ ಮಹಾರಾಷ್ಟç ಮಹಿಳಾ ಮತ್ತು ಜೂನಿಯರ್ ಬಾಲಕಿಯರ ರಾಷ್ಟಿçÃಯ ಮಟ್ಟದ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಐದಾ ತಿಮ್ಮಯ್ಯ ಮೂರು ಕ್ಯಾಟಗರಿಯಲ್ಲಿ ಪ್ರಶಸ್ತಿಗಳಿಸುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾಳೆ.

೧೩ ರಿಂದ ೧೫ ವಯೋಮಿತಿಯ ಬಿ ಕ್ಯಾಟಗರಿಯಲ್ಲಿ ಆಡುತ್ತಿರುವ ಐದಾ ಬಿ ಕ್ಯಾಟಗರಿ ಮಾತ್ರವಲ್ಲದೆ ೧೫ ರಿಂದ ೧೮ರ ವಯೋಮಿತಿಯ ಎ ಕ್ಯಾಟಗರಿ ಹಾಗೂ ೧೮ ವಯೋಮಿತಿ ಮೇಲ್ಪಟ್ಟ ಮಹಿಳಾ ವಿಭಾಗದಲ್ಲೂ ಸ್ಪರ್ಧಿಸಿ ಮೂರು ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ವಿಶೇಷವಾಗಿದೆ.

೧೨ ವರ್ಷಕ್ಕೆ ಅದ್ಭುತ ಸಾಧನೆ

ಭಾರತದ ಗಾಲ್ಫ್ ಇತಿಹಾಸದಲ್ಲಿ ೧೨ ವರ್ಷದ ಪ್ರಾಯದಲ್ಲಿಯೇ ಮೂರೂ ವಿಭಾಗದಲ್ಲಿ ಸ್ಪರ್ಧಿಸಿ ಚಾಂಪಿಯನ್ ಪಟ್ಟ ಪಡೆದಿರುವ ಯುವತಿಯಾಗಿ ಇದೀಗ ಐದಾ ಗುರುತಿಸಲ್ಪಟ್ಟಿದ್ದಾಳೆ. ಮತ್ತೊಂದು ವಿಶೇಷವೆಂದರೆ ಐದಾ ೧೨ ವರ್ಷದವಳಾಗಿದ್ದು, ಈಕೆ ಸಿ ಕ್ಯಾಟಗರಿ ವಿಭಾಗದಲ್ಲಿ ಸ್ಪರ್ಧಿಸಬೇಕಾಗುತ್ತದೆ. ಆದರೆ ಈಕೆ ಈ ಹಿಂದೆ ಹಲವಾರು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಸಾಧನೆ ತೋರಿರುವ ಹಿನ್ನೆಲೆ ಗಾಲ್ಫ್ ಯೂನಿಯನ್ ಅನುಮತಿಯೊಂದಿಗೆ ೧೩ ರಿಂದ ೧೫ರ ವಯೋಮಿತಿಯ ಬಿ ಕ್ಯಾಟಗರಿಯಲ್ಲಿ ಸ್ಪರ್ಧೆ ಮಾಡಿದ್ದರು. ಇದೀಗ, ಬಿ ಕ್ಯಾಟಗರಿ, ೧೫ ರಿಂದ ೧೮ ರ ವಯೋಮಿತಿಯ ಎ ಕ್ಯಾಟಗರಿ ಹಾಗೂ ೧೮ ಮೇಲ್ಪಟ್ಟ ಮಹಿಳಾ ವಿಭಾಗದಲ್ಲೂ ಈ ಬಾರಿ ಸ್ಪರ್ಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಗಮನಾರ್ಹ ಸಾಧನೆಯಾಗಿದೆ.

೧೨ನೇ ವಯಸ್ಸಿಗೆ ಇಂಡಿಯನ್ ಗಾಲ್ಫ್ ಯೂನಿಯನ್ (IಉU) ಚಾಂಪಿಯನ್ ಶಿಪ್‌ನ ಮೂರು ವಿಭಾಗದಲ್ಲಿ ಸಾಧನೆ ತೋರಿರುವ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿರುವ ಐದಾ ಒತ್ತಡದ ನಡುವೆ ತನಗಿಂತ ಹಿರಿಯ ಆಟಗಾರ್ತಿಯರ ಎದುರು ಎದೆಗುಂದದೆ ಆಡಿ ಜಯಗಳಿಸಿದ ಕ್ಷಣ ರೋಮಾಂಚನ ಮೂಡಿಸಿದೆ ಎಂದಿದ್ದಾಳೆ. ಈ ಗೆಲುವು ತನಗೆ ದೊಡ್ಡಮೈಲಿಗಲ್ಲಾಗಿದೆ. ಹಲವು ಸಮಯದಿಂದ ಈ ಕನಸು ಇತ್ತು. ತನ್ನ ಸಾಧನೆಗೆ ತರಬೇತುದಾರರು, ಅಕಾಡೆಮಿ, ಪೋಷಕರು, ಸ್ನೇಹಿತರು ಕಾರಣರಾಗಿದ್ದು, ಎಲ್ಲರ ಪ್ರೋತ್ಸಾಹದಿಂದ ಈ ಸಾಧನೆಯಾಗಿದೆ. ಇಷ್ಟು ಶೀಘ್ರದಲ್ಲಿ ಲೇಡೀಸ್ ಮತ್ತು ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್ ಸಿಗಲಿದೆ ಎಂದು ಊಹಿಸಿರಲಿಲ್ಲ ಎಂದೂ ಐದಾ ಭಾವುಕರಾಗಿ ಪ್ರತಿಕ್ರಿಯಿಸಿದ್ದಾಳೆ.

ವ್ಯಾಗರ್‌ನಲ್ಲಿ ಪರಿಗಣನೆ

ಇಂಡಿಯನ್ ಗಾಲ್ಫ್ ಯೂನಿಯನ್ (IಉU) ನಲ್ಲಿ ಸಮಗ್ರ ಚಾಂಪಿಯನ್ ಆಗಿರುವ ಹಿನ್ನೆಲೆ ನಿಯಮಾವಳಿಯಂತೆ ಇದೀಗ ಐದಾ ವರ್ಲ್ಡ್ ಅಮೆಚೂರ್ ಗಾಲ್ಫ್ ರ‍್ಯಾಂಕಿAಗ್ (Wಂಉಖ) ನಲ್ಲಿ ಖಾತೆ ತೆರೆದಂತಾಗಿದೆ. ಇನ್ನು ಮುಂದೆ ವರ್ಲ್ಡ್ ಅಮೆಚೂರ್ ಗಾಲ್ಫ್ ರ‍್ಯಾಂಕಿAಗ್‌ನ ಎಲ್ಲಾ ಸ್ಪರ್ಧೆಗಳಿಗೂ ಈಕೆ ಪರಿಗಣಿಸಲ್ಪಡಲಿದ್ದು, ಮುಂದೆ ವಿಶ್ವ ರ‍್ಯಾಂಕಿAಗ್‌ಗೆ ಅರ್ಹತೆ ಪಡೆಯಲಿದ್ದಾಳೆ.

ಈ ಹಿಂದೆ ಐದಾ ಅಮೇರಿಕಾದಲ್ಲಿ ನಡೆದ ಯುಎಸ್ ಕಿಡ್ಸ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲೀ ವರ್ಲ್ಡ್ ನಂಬರ್ ೩ ಆಗಿ ಸಾಧನೆ ತೋರಿದ್ದಳು. ಅಲ್ಲದೆ ಹಲವಾರು ಪ್ರತಿಷ್ಠಿತ ಗಾಲ್ಫ್ ಕ್ರೀಡೆಯಲ್ಲೂ ಉತ್ತಮ ಸಾಧನೆ ತೋರಿದ್ದಾಳೆ. ಈಕೆ ಹೋಮ್ ಸ್ಕೂಲಿಂಗ್ ಮಾಡುತ್ತಿದ್ದು, ವಿಶೇಷವಾಗಿ ಈ ಕ್ರೀಡೆಯಲ್ಲೇ ತೊಡಗಿಸಿಕೊಂಡಿದ್ದಾಳೆ.

ಐದಾ ಮೂಲತಃ ವೀರಾಜಪೇಟೆಯವರಾದ ಬೆಂಗಳೂರಿನಲ್ಲಿ ನೆಲೆಸಿರುವ ರ‍್ಯಾಲಿಪಟು ಬಲ್ಲಚಂಡ ಡೆನ್ ತಿಮ್ಮಯ್ಯ ಹಾಗೂ ಸಂಜನಾ ತಿಮ್ಮಯ್ಯ ದಂಪತಿಯ ಪುತ್ರಿ. ದೊಡ್ಡಪ್ಪ ಲೆನ್ ತಿಮ್ಮಯ್ಯ ಭಾರತ ಹಾಕಿ ತಂಡದ ಮಾಜಿ ಆಟಗಾರರಾಗಿದ್ದಾರೆ. - ಶಶಿ ಸೋಮಯ್ಯ