*ಗೋಣಿಕೊಪ್ಪ, ಮೇ ೨೬: ಮಂಡ್ಯ ಕೃಷಿ ವಿಶ್ವ ವಿದ್ಯಾಲಯಕ್ಕೆ ವಿಸ್ತಾರವಾದ ಸಂಶೋಧನೆಗೆ ಅವಕಾಶ ಇದೆ ಎಂದು ಮಂಡ್ಯ ವಿಸಿ ಫಾರಂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ. ಸಿ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಮಂಡ್ಯ ವಿಸಿ ಫಾರಂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಅರಣ್ಯ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ ವನಸ್ಮಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಂಡ್ಯ ಕೃಷಿ ವಿಶ್ವ ವಿದ್ಯಾಲಯ ಪ್ರಾರಂಭಗೊAಡು ಸಂಶೋಧನೆಗೆ ಒತ್ತು ನೀಡಿ ಮುಂದುವರಿಯುತ್ತಿದೆ. ವಿಶ್ವವಿದ್ಯಾಲಯಕ್ಕೆ ಬಯಲು ಮತ್ತು ಬೆಟ್ಟ ಪ್ರದೇಶ ಹೊಂದಿರುವ ಜಿಲ್ಲೆಗಳು ಸೇರಿರುವುದರಿಂದ ಎರಡು ಬಗೆಯ ಸಂಶೋಧನೆಗೆ ಅವಕಾಶ ತೆರೆದುಕೊಂಡಿದೆ. ಜೀವವೈವಿಧ್ಯತೆ ಮತ್ತು ಕೃಷಿ ಆಧಾರಿತ ಸಂಶೋಧನೆಯಿAದ ಹೆಚ್ಚು ಸಾಧಿಸಬಹುದು. ಮಂಡ್ಯ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಎಲ್ಲ ರೀತಿಯಲ್ಲೂ ಸಂಶೋಧನೆಗೆ ಅವಕಾಶ ಇದೆ. ಸಂಶೋಧನೆಗೆ ಸಲಹೆ ಮತ್ತು ಮಾರ್ಗದರ್ಶನ ಮುಖ್ಯ ಎಂದರು.
ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯ ದೇಶದ ೩೨ ಅರಣ್ಯ ವಿದ್ಯಾಲಯದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಮೊದಲ ೬ ರ‍್ಯಾಂಕ್‌ಗಳಲ್ಲಿ ಪೊನ್ನಂಪೇಟೆ ಉಳಿಸಿಕೊಂಡಿರುವುದರಿAದ ಭವಿಷ್ಯದಲ್ಲಿ ಉತ್ತಮ ಹಸಿರು ಸೇವಕರನ್ನು ನೋಡುವಂತಾಗಿದೆ. ಅರಣ್ಯ ವಿದ್ಯಾರ್ಥಿಗಳು ಹಸಿರು ರಾಯಭಾರಿಯಾಗಿ ದೇಶ ಕಟ್ಟುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ಮಂಡ್ಯ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿ ಪ್ರವೇಶಾತಿಯಿಂದ ಶಿಕ್ಷಣ ಮುಗಿಯುವ ಪ್ರತಿ ಪ್ರಕ್ರಿಯೆ ಡಿಜಿಟಲ್ ತಂತ್ರಜ್ಞಾನದಲ್ಲಿ ಅಳವಡಿಸಲಾಗುವುದು ಎಂದರು.
ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ.ಬಿ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿರುವ ಅರಣ್ಯ ಮತ್ತು ಕೃಷಿ ಪ್ರದೇಶವನ್ನು ವಿಸ್ತರಿಸುವತ್ತ ಚಿಂತನೆ ಅವಶ್ಯ. ಶೇ. ೨೫ ರಷ್ಟು ಕೃಷಿ ಭೂಮಿಯನ್ನು ಗಿಡಗಳ ನಾಟಿ ಮೂಲಕ ಕೃಷಿ ಪ್ರದೇಶಕ್ಕೆ ವಿಸ್ತರಿಸಬೇಕಿದೆ ಎಂದು ಸಲಹೆ ನೀಡಿದರು. ಹವಾಮಾನ ವೈಪರಿತ್ಯ ಇಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ವಿದ್ಯಾರ್ಥಿಗಳು ಹವಾಮಾನ ವೈಪರಿತ್ಯಕ್ಕೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದರು.
ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ ಮಾತನಾಡಿ, ಭೂಮಂಡಲದಲ್ಲಿ ಹವಾಮಾನ ವೈಪರಿತ್ಯದಿಂದ ಆಗುತ್ತಿರುವ ತೊಂದರೆ, ಸಮಸ್ಯೆಗೆ ಮೂಲ ಕಾರಣ ಅರಿತು ಸಂಶೋಧನೆ ನಡೆಸಲು ಉತ್ಸಾಹ ತೋರಬೇಕಿದೆ. ಶಿಸ್ತಿನ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ಯುಪಿಎಸ್‌ಸಿ, ಐಎಫ್‌ಎಸ್ ಪರೀಕ್ಷೆ ಎದುರಿಸಲು ಸಾಧ್ಯವಿದೆ ಎಂದರು.
ಆಕಾಶ್, ಕಿರಣ್, ಕೀರ್ತನ, ಪ್ರವೀಣ್, ಸಂಗೀತ ಅವರುಗಳು ರೈತಗೀತೆ ಹಾಡಿದರು. ಭುವನಪ್ರಿಯ ಸ್ವಾಗತಿಸಿದರು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ನಿಲಯಗಳ ಪ್ರಧಾನ ಕಾರ್ಯದರ್ಶಿಗಳಾದ ಅನುಷಾ ಮತ್ತು ಸುದೀಪ್ ವರದಿ ವಾಚಿಸಿದರು. ಕಾಲೇಜು ವಾರ್ಷಿಕೋತ್ಸವ ವನಸ್ಮಿತ ಸಂಚಿಕೆ ಹಾಗೂ ಕಾಲೇಜು ಕರಪತ್ರ ಬಿಡುಗಡೆಗೊಳಿಸಲಾಯಿತು. ಕಾಲೇಜು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ವಿಜೇತರಿಗೆ ಬಹುಮಾನ ನೀಡಲಾಯಿತು.
ಪ್ರಶಸ್ತಿ ಪ್ರದಾನ
ಟಿ. ಡಿ. ರಕ್ಷಿತಾ, ಟಿ.ವಿ. ಪ್ರಕೃತಿ, ಕೆ. ಚಿನ್ಮಯಿ ಅವರಿಗೆ ಫೋರಲ್ ಸ್ಪಂದನಾ ಪ್ರಶಸ್ತಿ, ಎಸ್. ಅನುಷಾ ಅವರಿಗೆ ಶಾಂತಕುಮಾರಿ ಜ್ಞಾಪಕಾರ್ಥ ಪ್ರಶಸ್ತಿ, ಸಿ. ಭೂಮಿಕಾಗೆ ಮುನಿವೆಂಕಟರಮಣ ಮತ್ತು ನಾರಾಯಣಪ್ಪ ಜ್ಞಾಪಕಾರ್ಥ ಪ್ರಶಸ್ತಿ, ಎಸ್. ಅನುಷಾ ಅವರಿಗೆ ಡಾ. ಸಿ.ಎಸ್‌ಪಿ ಪಾಟೀಲ್ ಜ್ಞಾಪಕಾರ್ಥ ಪ್ರಶಸ್ತಿ, ಸಿಲ್ವರ್ ಜೂಬ್ಲಿ ಪ್ರಶಸ್ತಿ, ಉತ್ತಮ ವಿದ್ಯಾರ್ಥಿ ಪ್ರಶಸ್ತಿ, ಎಸ್. ಗೀತಾ ಅವರಿಗೆ ಜಾಗ್ವಾರ್ ಉತ್ತಮ ವಿದ್ಯಾರ್ಥಿ ಪ್ರಶಸ್ತಿ, ಎಚ್. ಕೆ. ತನುಶ್ರೀಗೆ ಎಎಸ್‌ಎಫ್‌ಕೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿ ವಸತಿ ನಿಲಯದ ಮುಖ್ಯ ನಿಲಯಪಾಲಕ ಡಾ. ಟಿ. ಎಸ್. ಹರೀಶ್, ವಿದ್ಯಾರ್ಥಿನಿ ವಸತಿ ನಿಲಯ ನಿಲಯ ಪಾಲಕಿ ಡಾ. ಲಕ್ಷಿö್ಮ ಬಳಗೂರಮಠ, ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ನಿಂಗರಾಜ್ ದಳವಾಯಿ ಉಪಸ್ಥಿತರಿದ್ದರು.