ಮಡಿಕೇರಿ, ಮೇ ೨೬: ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದಿAದ ೮ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು ಮುದ್ರಣ ಮಾಧ್ಯಮಕ್ಕೆ ಅತ್ಯುತ್ತಮ ಕ್ರೀಡೆ, ರಾಜಕೀಯ, ಕೃಷಿ ಹಾಗೂ ಗ್ರಾಮೀಣ ವರದಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸಂಘದ ಹಿರಿಯ ಸಲಹೆಗಾರರಾದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿ, ಗ್ರಾಮೀಣ ವರದಿ - ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಮತ್ತು ಪುತ್ರ ಬಿ.ಎನ್. ಅಂಜನ್ ಅವರು ದಿ. ಬಿ.ಆರ್.ಶಶಿರಮ್ಮ ಮತ್ತು ದಿ. ಬಿ.ಟಿ. ರಾಮದಾಸ ಶೆಟ್ಟಿ ಅವರ ಜ್ಞಾಪಕಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿ.

ಕೃಷಿ ವರದಿ - ಶ್ರೀಮತಿ ಕಾಂತಿ ಸತೀಶ್ ಅವರು ನೀಡಿರುವ ದತ್ತಿ ಪ್ರಶಸ್ತಿ.ಕ್ರೀಡಾವರದಿ - ದಿ.ಕೆ.ಬಿ. ಮಹಂತೇಶ್ ಸ್ಮರಣಾರ್ಥ ಅವರ ಪತ್ನಿ ಭಾಗೀರಥಿ ಅವರು ನೀಡಿರುವ ಪ್ರಶಸ್ತಿ.ರಾಜಕೀಯ ವರದಿಗಾಗಿ ನಾಪಂಡ ಮುತ್ತಪ್ಪ ಅವರ ತಾಯಿ ನಾಪಂಡ ಬೋಜಮ್ಮ ಅವರ ಹೆಸರಿನಲ್ಲಿ ನೀಡಿರುವ ಪ್ರಶಸ್ತಿ. ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಮಾನವೀಯ ವರದಿಗಾಗಿ - ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಅವರು ದಿ.ಮೀರಾ ಕಾಮತ್ ಮತ್ತು ಎಂ.ಜಿ. ಪದ್ಮನಾಭ ಕಾಮತ್ ಸ್ಮರಣಾರ್ಥ ಸ್ಪಾಪಿಸಿರುವ ದತ್ತಿ ನಿಧಿ, ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಬAಧಿಸಿದAತೆ ಉತ್ತಮ ವರದಿಗಾಗಿ - ನಾಪಂಡ ಮುದ್ದಪ್ಪ ಅವರ ತಂದೆ ನಾಪಂಡ ದಿ. ಮುತ್ತಣ್ಣ ಅವರ ಹೆಸರಿನಲ್ಲಿ ನೀಡಿರುವ ಪ್ರಶಸ್ತಿ, ಪತ್ರಿಕೆಗಳಲ್ಲಿ ಪ್ರಕಟವಾದ ಅತ್ಯುತ್ತಮ ಪರಿಣಾಮಕಾರಿ ವರದಿಗಾಗಿ - ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ಗುಡ್ಡೆಮನೆ ವಿಶುಕುಮಾರ್ ನೀಡಿರುವ ಪ್ರಶಸ್ತಿ. ಈ ಎಲ್ಲಾ ಪ್ರಶಸ್ತಿಗಳಿಗೆ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ.

ದೃಶ್ಯ ಮಾಧ್ಯಮಕ್ಕೆ ಅತ್ಯುತ್ತಮ ಮಾನವೀಯ ವರದಿ ಮತ್ತು ಕೊಡಗಿನ ಜ್ವಲಂತ ಸಮಸ್ಯೆಗಳ ಕುರಿತಾದ ವರದಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.ಕೊಡಗು ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಮಾತ್ರ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವರದಿಗಳು ೨೦೨೫ ರ ಜನವರಿಯಿಂದ ೨೦೨೫ರ ಡಿಸೆಂಬರ್ ಅಂತ್ಯದೊಳಗೆ ಪ್ರಕಟವಾಗಿರಬೇಕು. ವರದಿಯಲ್ಲಿ ವರದಿಗಾರನ ಹೆಸರು ಇಲ್ಲದಿದ್ದರೆ ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ದೃಢೀಕರಣವಿರಬೇಕು.

ಒಬ್ಬರು ಒಂದು ಪ್ರಶಸ್ತಿಗೆ ತಮ್ಮ ಒಂದು ವರದಿಯನ್ನು ಮಾತ್ರ ಸಲ್ಲಿಸಬೇಕಾಗಿದೆ. ಟಿವಿ ಮಾಧ್ಯಮದವರು ಕೂಡ ಒಂದು ಪ್ರಶಸ್ತಿಗೆ ಒಂದು ವರದಿಯನ್ನು ಮಾತ್ರ ಕಳುಹಿಸಬಹುದಾಗಿದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ವರದಿಯ ಮೂರು ಜೆರಾಕ್ಸ್ ಪ್ರತಿಗಳು ಮತ್ತು ಮಾಧ್ಯಮದವರು ಪೆನ್‌ಡ್ರೆöÊವ್ ಅಥವಾ ಡಿವಿಡಿಯನ್ನು ಜೂನ್ ೧೦ ಒಳಗಾಗಿ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ ಕೊಡಗು ಪತ್ರಕರ್ತರ ಸಂಘ ಅ/o ಕೊಡಗು ಪತ್ರಿಕಾಭವನ ಟ್ರಸ್ಟ್, ದಿ. ಗೋಪಾಲಕೃಷ್ಣ ರಸ್ತೆ ಕೈಗಾರಿಕಾ ಬಡಾವಣೆ ಮಡಿಕೇರಿ. ಈ ವಿಳಾಸಕ್ಕೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ೯೪೪೯೨೯೦೭೧೮/ ೯೮೪೪೦೬೦೧೭೪ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.