ಮಡಿಕೇರಿ, ಮೇ ೩೧: ೨೦೨೬-೨೭ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿಪೂರ್ವ ಕಾಲೇಜುಗಳು ಪ್ರಾರಂಭವಾಗಿರುತ್ತವೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ವಿತರಿಸಲಾಗುವುದು. ಪಾಸು ಪಡೆಯಲು ವಿದ್ಯಾರ್ಥಿಗಳು ಈ ಕ್ರಮ ಅನುಸರಿಸಬೇಕಿದೆ.

ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸೇವಾಸಿಂಧು ಪೋರ್ಟಲ್ ಐಡಿ Uಖಐ-hಣಣಠಿs://sevಚಿsiಟಿಜhuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ/busಠಿಚಿssseಡಿviಛಿes/. ವಿದ್ಯಾರ್ಥಿಗಳು ಮೇ ೨೯ ರಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಇದಲ್ಲದೆ, ವಿದ್ಯಾರ್ಥಿಗಳು, ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ ರೂ. ೩೦ ಸೇವಾ ಶುಲ್ಕವನ್ನು ಈ ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿದೆ.

ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್‌ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಡಿಕ್ಲರೇಷನ್ ಫಾರ್ಮ್ನ್ನು ಸೇವಾಸಿಂಧು ತಂತ್ರಾAಶದಲ್ಲಿ ಅಥವಾ ಕರಾರಸಾ ನಿಗಮದ ವೆಬ್‌ಸೈಟ್‌ನಲ್ಲಿ (hಣಣಠಿs://ಞsಡಿಣಛಿ.ಞಚಿಡಿಟಿಚಿಣಚಿಞಚಿ.gov.iಟಿ/sಣuಜeಟಿಣಠಿಚಿss) ಡೌನ್‌ಲೋಡ್ ಮಾಡಿಕೊಳ್ಳುವುದು ಹಾಗೂ ಅದನ್ನು ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪಾಸ್ ಕೌಂಟರ್ ಆಯ್ಕೆ ಮಾಡಿ ಸಲ್ಲಿಕೆ ಮಾಡುವುದು.

ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ವಿಳಾಸದ ಮಾಹಿತಿ ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮುಖೇನ ಕಳುಹಿಸಲಾಗುವುದು. ವಿದ್ಯಾರ್ಥಿ ಪಾಸನ್ನು ಜೂನ್ ೧ ರಿಂದ ನಿಗದಿತ ಪಾಸ್ ಕೌಂಟರ್‌ಗಳಲ್ಲಿ ವಿತರಿಸಲಾಗುವುದು.

ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್‌ಗೆ ತೆರಳಿ. ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ UPI ಮುಖೇನ ಪಾವತಿಸಿ ಪಾಸು ಪಡೆಯಬಹುದು.

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಅಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದೆ. ಈ ಯೋಜನೆಯ ಸೌಲಭ್ಯ ವಿದ್ಯಾರ್ಥಿನಿಯರು ಪಡೆಯಬಹುದಾಗಿದೆ.

ನೆರೆರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ/ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ/ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯುವ ಅಗತ್ಯವಿದೆ. ಈ ಕ್ರಮ ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದು.

ಕರಾರಸಾ ನಿಗಮ ವ್ಯಾಪ್ತಿಯ ೧೨೩ ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ನಿಗಮದ ವೆಬ್‌ಸೈಟ್: hಣಣಠಿs://ಞsಡಿಣಛಿ.ಞಚಿಡಿಟಿಚಿಣಚಿಞಚಿ.gov.iಟಿ/sಣuಜeಟಿಣ ಠಿಚಿss

ವಿದ್ಯಾರ್ಥಿ ಪಾಸಿನ ದರಗಳು: ಪ್ರಾಥಮಿಕ ಶಾಲೆ ೧೦ ತಿಂಗಳು, ಸಾಮಾನ್ಯ ವಿದ್ಯಾರ್ಥಿಗಳಿಗೆ ೧೦೦+೫೦ = ೧೫೦, ಪ.ಜಾ ಹಾಗೂ ಪ.ಪಂ.ವಿದ್ಯಾರ್ಥಿಗಳಿಗೆ ೧೦೦+೫೦=೧೫೦, ಪ್ರೌಢಶಾಲೆ ಬಾಲಕರಿಗೆ ೧೦ ತಿಂಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ೬೦೦+೧೦೦+೫೦ ರೂ.೭೫೦, ಪ.ಜಾ ಹಾಗೂ ಪ.ಪಂ ವಿದ್ಯಾರ್ಥಿಗಳಿಗೆ ೧೦೦+೫೦ ರೂ.೧೫೦, ಪ್ರೌಢಶಾಲೆ ಬಾಲಕಿಯರಿಗೆ ೧೦ ತಿಂಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ೪೦೦+೧೦೦+೫೦ ರೂ.೫೫೦, ಪ.ಜಾ ಹಾಗೂ ಪ.ಪಂ. ವಿದ್ಯಾರ್ಥಿಗಳಿಗೆ ೧೦೦+೫೦ ರೂ.೧೫೦, ಕಾಲೇಜು/ಡಿಪ್ಲೋಮಾ ಸಾಮಾನ್ಯ ವಿದ್ಯಾರ್ಥಿಗಳಿಗೆ ೧೦ ತಿಂಗಳು ೯೦೦+೧೦೦+೫೦ ರೂ. ೧೦೫೦, ಪ.ಜಾ ಹಾಗೂ ಪ.ಪಂ ವಿದ್ಯಾರ್ಥಿಗಳಿಗೆ ೧೦೦+೫೦=೧೫೦, ಐಟಿಐ ೧೨ ತಿಂಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ೧೧೫೦+೧೦೦+೬೦ ರೂ. ೧೩೧೦, ಪ.ಜಾ ಹಾಗೂ ಪ.ಪಂ. ವಿದ್ಯಾರ್ಥಿಗಳಿಗೆ ೧೦೦+೬೦= ರೂ. ೧೬೦, ವೃತ್ತಿಪರ ಕೋರ್ಸುಗಳು ೧೦ ತಿಂಗಳು, ಸಾಮಾನ್ಯ ವಿದ್ಯಾರ್ಥಿಗಳಿಗೆ ೧೪೦೦+೧೦೦+೫೦ ರೂ. ೧೫೫೦, ಪ.ಜಾ ಹಾಗೂ ಪ.ಪಂ. ವಿದ್ಯಾರ್ಥಿಗಳಿಗೆ ೧೦೦+೫೦ ರೂ. ೧೫೦, ಸಂಜೆ ಕಾಲೇಜು/ಪಿಹೆಚ್‌ಡಿ ೧೦ ತಿಂಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ೧೨೦೦+೧೦೦+೫೦ = ರೂ.೧೩೫೦, ಪ.ಜಾ ಹಾಗೂ ಪ.ಪಂ.ವಿದ್ಯಾರ್ಥಿಗಳಿಗೆ ೧೦೦+೫೦ ರೂ.೧೫೦ ಆಗಿರುತ್ತದೆ.

ವಿದ್ಯಾರ್ಥಿ ಪಾಸುಗಳಿಗೆ ಅರ್ಜಿ ಸಲ್ಲಿಕೆ/ ಪಾಸು ಮುದ್ರಣ ಸಂಬAಧ ದೂರುಗಳಿದ್ದಲ್ಲಿ. ಸಹಾಯವಾಣಿ ಸಂಪರ್ಕಿಸುವುದು. ದೂರು/ ಸಲಹೆಗಳಿಗೆ ಸೇವಾಸಿಂಧು ಪೋರ್ಟಲ್ ಮುಖೇನ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬAಧಿಸಿದ ವಿಷಯಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ/ಇ-ಮೇಲ್ ವಿಳಾಸ ೦೮೦-೨೪೪೧೦೫೭೪, e-mಚಿiಟ:sevಚಿsiಟಿಜhu@ಞಚಿಡಿಟಿಚಿಣಚಿಞಚಿ.gov.iಟಿ, ಪಾಸ್ ವಿತರಣಾ ಕೇಂದ್ರಗಳಲ್ಲಿ ಪಾಸ್ ಕಾರ್ಡ್ ಮುದ್ರಣ ಮತ್ತು ವಿತರಣೆಗೆ ಸಂಬAಧಿಸಿದ ವಿಷಯಗಳಿಗೆ ೮೯೦೪೦೮೫೦೩೦/ ೦೮೦-೪೯೨೦೩೮೮೮, e-mಚಿiಟ: oಟಿeheಟಠಿಜesಞ@ಞಚಿಡಿಟಿಚಿಣಚಿಞಚಿ.gov.iಟಿ ಹಾಗೂ ಕರಾರಸಾ ನಿಗಮದ ಕಾಲ್ ಸೆಂಟರ್ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ/ಇ-ಮೇಲ್ ವಿಳಾಸ ೦೮೦-೨೬೨೫೨೬೨೫, e-mಚಿiಟ: ಛಿಚಿಟಟಛಿeಟಿಣಡಿe@ಞsಡಿಣಛಿ.oಡಿg. ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು(ವಾಣಿಜ್ಯ) ತಿಳಿಸಿದ್ದಾರೆ.