ಕುಶಾಲನಗರ, ಜೂ. ೨೮: ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಕೊಡಗು ಜಿಲ್ಲಾ ಘಟಕದ ಸಭೆ ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಸಂಘಟನೆ ಹಾಗೂ ನೂತನ ಸಮಿತಿ ರಚನೆ ಬಗ್ಗೆ ಚರ್ಚಿಸಲಾಯಿತು.
ಸಮುದಾಯದ ಹಿಂದುಳಿದವರು ತಮ್ಮ ಹಕ್ಕನ್ನು ಪ್ರತಿಪಾದಿಸಲು, ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವAತೆ ಸಭೆಯಲ್ಲಿದ್ದ ಪ್ರಮುಖರು ಸಲಹೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ , ಜಿಲ್ಲೆಯಲ್ಲಿ ಹಿಂದುಳಿದ ಒಕ್ಕಲಿಗ ಸಮುದಾಯದ ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೂಕ್ತ ಪದಾಧಿಕಾರಿಗಳನ್ನು ನಿಯೋಜಿಸಿ ಸಮುದಾಯದವರನ್ನು ಒಗ್ಗೂಡಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಕುಮಾರಿ ಸಂಘಟನೆ ಬಗ್ಗೆ ಮಾರ್ಗದರ್ಶನ ಸಲಹೆ ನೀಡಿದರು. ೨೦೧೯ ರಲ್ಲಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು. ಹಿಂದುಳಿದವರಿಗೆAದೇ ಸರಕಾರ ನೂರಾರು ಕೋಟಿ ಅನುದಾನ ಒದಗಿಸುತ್ತಿದ್ದರೂ ಅದು ಅರ್ಹರಿಗೆ ತಲುಪುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಸಮುದಾಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ನಾವು ಮಾಹಿತಿ ಹೊಂದುವ ಅಗತ್ಯವಿದೆ. ಜ್ಞಾನವಂತರಾದಾಗ ಮಾತ್ರ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ಯಾವುದೇ ಅಡ್ಡಿಯಿಲ್ಲದೆ ಪಡೆದುಕೊಳ್ಳಬಹುದು. ಇದಕ್ಕಾಗಿ ನಾವು ಪರಸ್ಪರ ಹೊಂದಾಣಿಕೆಯಿAದ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಸAಘದ ಪ್ರಧಾನ ಕಾರ್ಯದರ್ಶಿ ಸುಧಾಮಣಿ, ಸಂಘಟನಾ ಕಾರ್ಯದರ್ಶಿ ಜಿತೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಪುಟ್ಟೇಗೌಡ ಮಾತನಾಡಿದರು.
ಸಭೆಯಲ್ಲಿ ಕುಶಾಲನಗರ, ಸೋಮವಾರಪೇಟೆ. ವೀರಾಜಪೇಟೆ ತಾಲೂಕಿನ ಪ್ರಮುಖರುಗಳಾದ ಪ್ರದೀಪ್, ಹೂವಯ್ಯ, ಡಾಲು ತಿತಿಮತಿಯ ಮಂಜುನಾಥ್, ನೀರಾವರಿ ಸಲಹಾ ಸಮಿತಿ ಸದಸ್ಯ ಐಗೂರಿನ ಎ.ಪಿ.ಸುಬ್ಬಯ್ಯ, ಪತ್ರಕರ್ತೆ ಉಷಾ ಪ್ರೀತಂ, ಮೂರ್ನಾಡು ನಟೇಶ್ ಮತ್ತಿತರರು ಇದ್ದರು.