ಗೋಣಿಕೊಪ್ಪಲು, ಜೂ. ೩೦: ಗೋಣಿಕೊಪ್ಪಲು ರೋಟರಿ ಕ್ಲಬ್‌ನ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ.ಪಿ. ಪ್ರಮೋದ್ ಕಾಮತ್ ಹಾಗೂ ಕಾರ್ಯದರ್ಶಿಯಾಗಿ ಎಂ.ಕೆ. ಮಾಚಯ್ಯ ನೇಮಕಗೊಂಡಿದ್ದಾರೆ.

ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಜುಲೈ ೧ ರಂದು ಸಂಜೆ ೭ ಗಂಟೆಗೆ ಗೋಣಿಕೊಪ್ಪಲುವಿನ ಸ್ಪೆöÊಸಸ್ ರಾಕ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ರೋಟರಿ ಪ್ರಮುಖರಾದ ಯಶಸ್ವಿ ಎಸ್. ಸೋಮಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಹಾಯಕ ರಾಜ್ಯಪಾಲ ಸಿ.ಎನ್. ವಿಜಯ್ ಹಾಗೂ ಜೆ.ಕೆ. ಸುಭಾಷಿಣಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.