ನಾಪೋಕ್ಲು, ಜು. ೧೧ : ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ನಾಪೋಕ್ಲಿನ ೨೦೨೬-೨ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸ್ಥಳೀಯ ಕೊಡವ ಸಮಾಜದಲ್ಲಿ ಜರುಗಿತು

ನಿರ್ಗಮಿತ ಅಧ್ಯಕ್ಷ ಮಾದೇಯಂಡ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ರಾಜ್ಯಪಾಲ ಗೋವರ್ಧನ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಬಳಿಕ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸುವುದರೊಂದಿಗೆ ಪದಗ್ರಹಣ ನೆರವೇರಿಸಿ ಲಯನ್ಸ್ ಕ್ಲಬ್ಬಿನ ಧ್ಯೇಯ ಉದ್ದೇಶಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಬಾಲಕೃಷ್ಣ, ನಿರ್ಗಮಿತ ಖಜಾಂಚಿ ಅಪ್ಪಚೆಟ್ಟೋಳಂಡ ವಸಂತ ಇದ್ದರು. ನೂತನ ಅಧ್ಯಕ್ಷರಾಗಿ ಅಪ್ಪುಮಣಿಯಂಡÀ ಬನ್ಸಿ ಭೀಮಯ್ಯ, ಕಾರ್ಯದರ್ಶಿಯಾಗಿ ಚೇಯಂಡ ರಘು ತಿಮ್ಮಯ್ಯ, ಖಜಾಂಚಿ ಬೊಪ್ಪೆರ ಜಯ ಉತ್ತಪ್ಪ ಮತ್ತು ಇನ್ನಿತರರು ಇದ್ದರು. ಲಿಯೋ ಕ್ಲಬ್ ಅಧ್ಯಕ್ಷರಾಗಿ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಾದ ಧ್ರುವ ದೇವಯ್ಯ, ಕಾರ್ಯದರ್ಶಿ ಯಾಗಿ ರಿಚ ಪೂಣಚ್ಚ, ಖಜಾಂಚಿ ಹೇಮಾವತಿ ಅಧಿಕಾರ ಸ್ವೀಕರಿ ಸಿದರು.