ಕೂಡಿಗೆ, ಜು. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಎನ್.ಡಿ.ಆರ್.ಎಫ್ ತಂಡದ ವತಿಯಿಂದ ಮೀನುಗಾರರಿಗೆ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತು.

ಎನ್.ಡಿ.ಆರ್.ಎಫ್.ನ ಬೆಂಗಳೂರು ೧೦. ನೇ ಬೆಟಲಿಯನ್ ಇನ್ಸ್ಪೆಕ್ಟರ್ ಟೀಮ್ ಕಮಾಂಡರ್ ರಾಮ್ ಬಜ್ಜ ಅವರ ಮಾರ್ಗದರ್ಶನದಲ್ಲಿ ಮೀನುಗಾರಿಕರರಿಗೆ ವಿಪತ್ತು ಸಂದರ್ಭದಲ್ಲಿ, ಪ್ರವಾಹದ ಸಂದರ್ಭದಲ್ಲಿ ಹೇಗೆ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮತ್ತು ಮುಂಜಾಗ್ರತಾವಾಗಿ ಅನುಸರಿಸಬೇಕಾದ ನಿಯಮಗಳನ್ನು ಮೀನುಗಾರಿಕೆಯಲ್ಲಿ ತೊಡಗುವ ಮೀನುಗಾರರಿಗೆ ಇಲಾಖೆಯ ಮಾಹಿತಿಯನ್ನು ಎನ್.ಡಿ.ಆರ್.ಎಫ್.ನ ಎ.ಎಸ್.ಐ. ಸೋಮವೀರ್ ಕುಮಾರ್, ಕೆ.ಬಿ. ಸತೀಶ್ ತಿಳಿಸುವುದರ ಜೊತೆಯಲ್ಲಿ ಘಟನೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಮತ್ತು ಪ್ರಥಮ ಚಿಕಿತ್ಸೆ ಕ್ರಮಗಳ ಬಗ್ಗೆ ಮೀನುಗಾರಿಕೆ ಇಲಾಖೆಯ ಸಾಕಾಣಿಕೆ ಕೇಂದ್ರದ ಸಭಾಂಗಣದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಹಾರಂಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್, ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಭರತ್, ಹಾರಂಗಿಯಲ್ಲಿರುವ ಕಾವೇರಿ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್, ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು ಹಾಜರಿದ್ದರು.