ಚೆಯ್ಯಂಡಾಣೆ, ಜು. ೨೩: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ೫೩ ವರ್ಷಗಳಿಂದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. "ಸಂಸ್ಕೃತಿ, ಸ್ವಭಾವ, ಸಮಾಜ" ಎಂಬ ಧ್ಯೇಯವಾಕ್ಯದೊಂದಿಗೆ ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವಲ್ಲಿ ಎಸ್‌ಎಸ್‌ಎಫ್ ಯಶಸ್ವಿಯಾಗಿದೆ.
೧೯೭೩ರಲ್ಲಿ ಕೇರಳದಲ್ಲಿ ಸ್ಥಾಪನೆಯಾದ ಎಸ್‌ಎಸ್‌ಎಫ್ ಧಾರ್ಮಿಕ ವಿದ್ಯಾರ್ಥಿ ಸಂಘಟನೆಯು ಗೋಲ್ಡನ್ ಫಿಫ್ಟಿ ಸಂಭ್ರಮದ ನಂತರ ಇದೀಗ ಕರ್ನಾಟಕದಲ್ಲಿ ಎಸ್‌ಎಸ್‌ಎಫ್ ಸಾಹಿತ್ಯೋತ್ಸವದ ಕಾವು ಮತ್ತಷ್ಟು ಹೆಚ್ಚಿದೆ. ೧೯೮೯ರಲ್ಲಿ ಕರ್ನಾಟಕದಲ್ಲಿ ಅಧಿಕೃತವಾಗಿ ಸ್ಥಾಪನೆಯಾದ ಎಸ್‌ಎಸ್‌ಎಫ್ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಸಾಹಿತ್ಯೋತ್ಸವವನ್ನು ಆಯೋಜಿಸುವುದರ ಮೂಲಕ ಎಲೆಮರೆ ಕಾಯಿಯಂತಿರುವ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಗುಂಡಿಕೆರೆ ಮಸೀದಿ ಸಭಾಂಗಣದಲ್ಲಿ ತಾ. ೨೫ ಹಾಗೂ ೨೬ ರಂದು ಜಿಲ್ಲಾಮಟ್ಟದ ಸಾಹಿತ್ಯೋತ್ಸವವನ್ನು ಏರ್ಪಡಿಸಲಾಗಿದೆ.
ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯೋತ್ಸವ
ಎಸ್‌ಎಸ್‌ಎಫ್ ಸಂಘಟನೆ ೨೦೦೩ರಲ್ಲಿ ಪ್ರಾರಂಭಿಸಿದ ಸಾಹಿತ್ಯೋತ್ಸವ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಎರಡು ವರ್ಷಗಳಿಗೊಮ್ಮೆ ಸಾಹಿತ್ಯೋತ್ಸವ ನಡೆಯುತ್ತಿತ್ತು. ೨೦೦೩ ರಿಂದ ೨೦೨೧ ರವರೆಗೆ "ಪ್ರತಿಭೋತ್ಸವ" ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಲಾ ಕಾರ್ಯಕ್ರಮ ೨೦೨೩ ರಿಂದ ಅಧಿಕೃತವಾಗಿ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ನಡೆಯುತ್ತಿದ್ದು, ಈ ಬಾರಿ ಗುಂಡಿಕೆರೆಯಲ್ಲಿ ನಡೆಯುತ್ತಿರುವುದು ೧೪ನೆಯ ಸಾಹಿತ್ಯೋತ್ಸವವಾಗಿದೆ. ರಾಜ್ಯ ಮಟ್ಟದವರೆಗೆ ಮಾತ್ರ ಸೀಮಿತವಾಗಿದ್ದ ಎಸ್‌ಎಸ್‌ಎಫ್ ಸಾಹಿತ್ಯೋತ್ಸವವು ೨೦೨೧ ರಿಂದ ರಾಷ್ಟಿçÃಯ ಮಟ್ಟದಲ್ಲಿ ಕೂಡ ಆಯೋಜನೆಗೊಳ್ಳುತ್ತಿದೆ.
ಯೂನಿಟ್ ಮಟ್ಟದಲ್ಲಿ ಆಯ್ಕೆಯಾದ ಪ್ರತಿಭೆಗಳು ಸೆಕ್ಟರ್ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮೊದಲ ಸ್ಥಾನ ಪಡೆದ ಪ್ರತಿಭೆಗಳು ಡಿವಿಷನ್ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ಜಿಲ್ಲಾಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆ ಆಗುತ್ತಾರೆ. ಮೂರು ಡಿವಿಷನ್‌ಗಳ ಮಧ್ಯೆ ನಡೆಯುವ ಪೈಪೋಟಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ. ನಂತರ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ರಾಷ್ಟಿçÃಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ೭ ವಿಭಾಗ, ೧೬೦ಕ್ಕೂ ಹೆಚ್ಚು ಸ್ಪರ್ಧೆಗಳು, ೬೦೦ ರಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಎಸ್.ಎಸ್.ಎಫ್ ಸಾಹಿತ್ಯೋತ್ಸವವು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಿದೆ. ಈ ಬಾರಿ ಲಿಜೆಂಡ್ಸ್ ಎಂಬ ಮತ್ತೊಂದು ಕಾರ್ಯಕ್ರಮ ಕೂಡ ಸೇರ್ಪಡೆಗೊಂಡು ಯುವ ಜನತೆಗೆ ಸಾಹಿತ್ಯದ ಹುಮ್ಮಸ್ಸು ಮೂಡಿದೆ. ರಾಷ್ಟಿçÃಯ ಮಟ್ಟದಲ್ಲಿ ಸಾಹಿತ್ಯೋತ್ಸವ ನಡೆಯುತ್ತಿರುವುದರಿಂದ ಎಸ್‌ಎಸ್‌ಎಫ್ ರಾಜ್ಯ ಸಮಿತಿ ರಾಷ್ಟಿçÃಯ ಮಟ್ಟಕ್ಕೆ ಅನುಕೂಲವಾಗುವಂತಹ ವಿಷಯಗಳ ಸ್ಪರ್ಧೆಗಳಿಗೆ ಅವಕಾಶ ನೀಡಲಾಗಿದೆ.
೨೫ ವರ್ಷದೊಳಗಿನ ಸ್ಪರ್ಧಿಗಳು ಸಾಹಿತ್ಯೋತ್ಸವದಲ್ಲಿ ಭಾಗವಹಿಸ ಬಹುದಾಗಿದೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಕ್ಯಾಂಪಸ್ ಹಾಗೂ ಜನರಲ್ ವಿಭಾಗದಲ್ಲಿ ವಯಸ್ಸಿಗೆ ಅನುಗುಣವಾಗಿ, ಒಟ್ಟು ೭ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಗುಂಡಿಕೆರೆಯಲ್ಲಿ ತಾ. ೨೫ ರಿಂದ ನಡೆಯಲಿರುವ ಸಾಹಿತ್ಯೋತ್ಸವಕ್ಕೆ ಐದು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ೧೦ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ. ನೋಡುಗರ ಮನಸೂರೆಗೊಳ್ಳುವ ವೇದಿಕೆಗಳು ಸಜ್ಜುಗೊಂಡಿದ್ದು, ಸಾಹಿತ್ಯೋತ್ಸವದ ಪ್ರವೇಶದ್ವಾರ ನೋಡುಗರ ಗಮನ ಸೆಳೆಯುತ್ತಿದೆ. ರಾತ್ರಿ ಗುಂಡಿಕೆರೆಯ ಮಸೀದಿಯ ಆವರಣ ಹಾಗೂ ಪಟ್ಟಣ ದೀಪಾಲಂಕಾರದಿAದ ಕಂಗೊಳಿಸುತ್ತಿದೆ.
ಕೇರಳ, ಕರ್ನಾಟಕ ರಾಜ್ಯದ ಸಾಹಿತ್ಯೋತ್ಸವದಲ್ಲಿ ತೀರ್ಪು ನೀಡಿ ಅನುಭವವಿರುವ ನುರಿತ ತೀರ್ಪುಗಾರರು ಈ ಬಾರಿಯ ಕೊಡಗು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ತೀರ್ಪುಗಾರಿಕೆ ನೀಡಲಿದ್ದಾರೆ.
ಜಿಲ್ಲಾಮಟ್ಟದವರೆಗೆ ಮಾತ್ರ ಸಬ್ ಜೂನಿಯರ್ ಹಾಗೂ ಜೂನಿಯರ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಸೀನಿಯರ್, ಕ್ಯಾಂಪಸ್ ಹಾಗೂ ಜನರಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಬಹುದಾಗಿದೆ.
ಮೂರು ಡಿವಿಷನ್‌ಗಳ ಮಧ್ಯೆ ಪೈಪೋಟಿ!
ಎಸ್‌ಎಸ್‌ಎಫ್ ಕೊಡಗು ಜಿಲ್ಲಾಮಟ್ಟದ ಸಾಹಿತ್ಯೋತ್ಸವದಲ್ಲಿ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಸೆಕ್ಟರ್‌ಗಳ ಮಧ್ಯೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಪ್ರಶಸ್ತಿಗಾಗಿ ಫೇವರೇಟ್ ಡಿವಿಷನ್ ವೀರಾಜಪೇಟೆ ಹಾಗೂ ಮಡಿಕೇರಿ ಪೈಪೋಟಿ ನೀಡಲಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲಾಮಟ್ಟದ ಸಾಹಿತ್ಯೋತ್ಸವದ ಪ್ರಶಸ್ತಿಯನ್ನು ಈ ಎರಡು ಡಿವಿಷನ್ ಪ್ರತಿಭೆಗಳು ಗೆಲ್ಲುತ್ತಾ ಬಂದಿದ್ದಾರೆ. ಎಮ್ಮೆಮಾಡು, ನಾಪೋಕ್ಲು ಹಾಗೂ ಕೊಂಡAಗೇರಿ ಸೆಕ್ಟರ್ ಪ್ರತಿಭೆಗಳು ಮಡಿಕೇರಿ ಡಿವಿಷನ್ ಪ್ರತಿನಿಧಿಸಲಿದ್ದಾರೆ. ಕಡಂಗ, ಸಿದ್ದಾಪುರ, ಪಾಲಿಬೆಟ್ಟ ಸೆಕ್ಟರ್ ಪ್ರತಿಭೆಗಳು ವೀರಾಜಪೇಟೆ ಸೆಕ್ಟರ್‌ಅನ್ನು ಪ್ರತಿನಿಧಿಸಲಿದ್ದಾರೆ.
ನೆಲ್ಲಿಹುದಿಕೇರಿ ಸೆಕ್ಟರ್, ಕುಶಾಲನಗರ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆ ಸೆಕ್ಟರ್ ಪ್ರತಿಭೆಗಳು ಸೋಮವಾರಪೇಟೆ ಡಿವಿಷನ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೂರು ಡಿವಿಷನ್‌ಗಳ ಮಧ್ಯೆ ನಡೆಯುವ ಕೊಡಗು ಜಿಲ್ಲಾಮಟ್ಟದ ಸಾಹಿತ್ಯೋತ್ಸವದಲ್ಲಿ ಈ ಬಾರಿ ಅತಿ ಹೆಚ್ಚು ಸ್ಪರ್ಧೆಗಳು ಇರುವುದರಿಂದ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಎಂಬದು ಕಾದುನೋಡಬೇಕಾಗಿದೆ.
ಕನ್ನಡ, ಇಂಗ್ಲಿಷ್, ಉರ್ದು, ಅರಬಿ, ಮಲಯಾಳಂ ಭಾಷಣ, ಕನ್ನಡ, ಇಂಗ್ಲಿಷ್, ಉರ್ದು ಕವನ ರಚನೆ ಹಾಗೂ ಕವಿತೆ ಬರವಣಿಗೆ, ಸೈನ್ಸ್ ಮಾಡೆಲ್, ಡಿಬೇಟ್, ಟೆಡ್ ಟಾಕ್, ಕವಾಲಿ, ಬುರ್ದಾ, ನಶೀದಾ, ಕನ್ನಡ, ಉರ್ದು, ಮಲಯಾಳಂ ಹಾಡು, ಕನ್ನಡ, ಉರ್ದು, ಇಂಗ್ಲೀಷ್, ಪ್ರಬಂಧ, ಅನುವಾದ, ಕಥೆ ಹೇಳುವುದು, ಟ್ವೀಟ್, ಪೋಸ್ಟರ್ ಡಿಸೈನಿಂಗ್, ಡಿಜಿಟಲ್ ಡಿಸೈನಿಂಗ್, ಸ್ಪಾಟ್ ಮ್ಯಾಗಝಿನ್, ಕ್ವಿಝ್ ಸೇರಿ ಐದು ವಿಭಾಗಗಳಲ್ಲಿ ೧೬೦ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ.
ಕೊಡಗು ಜಿಲ್ಲಾ ಎಸ್‌ಎಸ್‌ಎಫ್ ಸಾಹಿತ್ಯೋತ್ಸವದಲ್ಲಿ ಪ್ರಥಮ ಸ್ಥಾನ ಪ್ರಡೆಯುವ ಪ್ರತಿಭೆಗಳು ಸೆಪ್ಟೆಂಬರ್ ೫ ಹಾಗೂ ೬ ರಂದು ವಿಜಯನಗರದಲ್ಲಿ ನಡೆಯುವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಪ್ರತಿಭೆಗಳು ಚೆನ್ನೆöÊಯಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇಂಗ್ಲಿಷ್, ಉರ್ದು, ಅರೇಬಿಕ್ ವಿಷಯಗಳ ಸ್ಪರ್ಧೆಗಳು ಮಾತ್ರ ರಾಷ್ಟಿçÃಯ ಮಟ್ಟದಲ್ಲಿ ನಡೆಯಲಿವೆ.
- ಅಶ್ರಫ್