ವೀರಾಜಪೇಟೆ, ಆ. ೨: ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದರ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಕಿವಿಮಾತು ಹೇಳಿದರು.

ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಿಕೆಗಳಲ್ಲಿ ವಿಶ್ವದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಇರಲಿದೆ. ಪ್ರತಿದಿನ ಸಮಯ ಮಾಡಿಕೊಂಡು ಪತ್ರಿಕೆಗಳನ್ನು ಓದಬೇಕು. ವಿವಿಧ ಪತ್ರಿಕೆಗಳು ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬAಧಿಸಿದ ವಿಚಾರವನ್ನು ಪ್ರಕಟಿಸುತ್ತವೆ. ಇವೆಲ್ಲವೂ ಉಪಯೋಗವಾಗಲಿದೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಮಾತನಾಡಿ, ಕರ್ನಾಟಕದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾಗಿ ಪತ್ರಿಕೋದ್ಯಮ ಇಲ್ಲಿಯವರೆಗೂ ವಿವಿಧ ಬದಲಾವಣೆಗಳನ್ನು ಕಂಡರೂ, ಪತ್ರಿಕೆಗಳು ವಿಶ್ವಾಸವನ್ನು ಉಳಿಸಿಕೊಂಡಿವೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ನಿರ್ದೇಶಕಿ ಬಿ.ಆರ್ ಸವಿತಾ ರೈ ಮಾತನಾಡಿ, ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ಓದುವುದು ಕಡಿಮೆಯಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಪತ್ರಿಕೆಗಳನ್ನು ಓದುವಂತಾಗಬೇಕು ಎಂದರು.

ರಾಷ್ಟಿçÃಯ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಪತ್ರಿಕಾ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲರಾದ ರೈಮಂಡ್, ಹಿರಿಯ ಉಪನ್ಯಾಸಕಿ ದಮಯಂತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಎ.ಎನ್ ವಾಸು, ನಿರ್ದೇಶಕ ರವಿಕುಮಾರ್ ಎಂ.ಕೆ, ಸಂತೋಷ್ ರೈ, ವೀರಾಜಪೇಟೆ ತಾಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಖಜಾಂಚಿ ಹೇಮಂತ್ ಕುಮಾರ್, ನಿರ್ದೇಶಕರಾದ ಡಿ.ಮಂಜುನಾಥ್, ತೇಜಸ್ ಪಾಪಯ್ಯ, ಸದಸ್ಯರಾದ ಕಾಂಗೀರ ಬೋಪಣ್ಣ, ನೌಫಲ್ ಕಡಂಗ ಹಾಜರಿದ್ದರು.

ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ‘ಅರಣ್ಯ ಜೀವ ವೈವಿಧ್ಯತೆ ಮತ್ತು ಜಲಮೂಲಗಳ ಸಂರಕ್ಷಣೆ’ ಎಂಬ ವಿಷಯದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸ್ಮಿತಾ ಟಿ.ಎಂ ಪ್ರಥಮ, ನಿತ್ಯ ಪಿ.ಎನ್ ದ್ವಿತೀಯ, ಕೌಶಲ್ಯ ಪಿ.ಎಸ್ ತೃತೀಯ ಬಹುಮಾ ಪಡೆದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ‘ಪಶ್ಚಿಮ ಘಟ್ಟದ ಪರಿಸರದ ಮಹತ್ವ ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ ಕೃತಿಕ ಎಂ.ಎಸ್ ಪ್ರಥಮ, ರಂಜಿತ ವೈ.ಎಂ ದ್ವಿತೀಯ ಹಾಗೂ ಇಸ್ಮಾ ಬೀಬಿ ತೃತೀಯ ಬಹುಮಾನ ಪಡೆದುಕೊಂಡರು.